ಗಝ಼ಲ್ : ೨೨
ಗಝ಼ಲ್ : ೨೨
ಹೆತ್ತ ಕಂದನ ಕತ್ತ ಹಿಸುಕದೆ ಕಸದ ತೊಟ್ಟಿಯಲ್ಲಿಟ್ಟವಳು ತಾಯಿಯೇ
ಮಮತೆಯಲಿ ಮಗುವಿಗೆ ದೇಹವ ಮಾರಿ ತುತ್ತನಿಕ್ಕಿದಾಕೆ ಮಾತೆಯೇ
ಚಿಂದಿಯುಟ್ಟವಳ ಕಂಡು ಕಾಣದಂತೆ ಪತಿಯೊಡನೆ ನಡೆದವಳ ಏನೆನ್ನಲಿ
ಬಡತನದಿ ಮುಳುಗಿದ ಸಖಿಯ ಕಣ್ತಪ್ಪಿಯೂ ನೋಡದವಳು ಗೆಳತಿಯೇ
ದುರುಳರು ಗೈದುದೆಲ್ಲವ ಕಂಡರೂ ಕಾಣದಂತಿಹಳು ನೋವು ಸಹಿಸುತಾ
ಮರುಳು ಹೆದೆಗೇರಿದ ಮಾನವರ ಕುಕೃತ್ಯವ ಸಹಿಸಿದವಳು ಪ್ರಕೃತಿಯೇ
ಅವಳು ಎಂದರೆ ಜಗದ ಎಲ್ಲ ಕಷ್ಟಗಳ ಸಹಿಸುತಾ ನಿತ್ಯ ನಗುತಿರುವವಳು
ನಿಜಕೂ ಮಹಿಳೆ ಕುಟುಂಬದ ಸದಸ್ಯರ ಜತನದಿಂದಲಿ ಪೊರೆವ ಶಕ್ತಿಯೇ
"ಸಿಡಿಲನು" ಕಂಡಂತೆ ಪ್ರತಿ ಹೆಣ್ಣು ಹುಟ್ಟಿದೊಡನೆಯೇ ಮಾತೆಯಾದಳು
ಅದೇಕೆ ಕೆಲವರೆನ್ನುವರು ಹೆಣ್ಣೆಂದರೆ ಯಾರೂ ಅರಿಯಲಾರದ ಮಾಯೇ
ವೈಲೇಶ ಪಿ ಯೆಸ್ ಕೊಡಗು
೧೩/೩/೨೦೧೮
Comments
Post a Comment