ರಂಗು ಇಂಗು

ರಂಗು-ಇಂಗು
~~~~~~~
ಬಣ್ಣಗಳ ಬಣ್ಣಗಳ ಅರಿಯಬಹುದು
ದೇಹಗಳ ಒಳಗನು ಬರೆಯಬಹುದು
ಒಳಗಿನ ಒಳಿತನು ಒದರಲೂಬಹುದು
ಮನಗಳ ತಿರುಳನು ತಿಳಿಯಬಹುದೇ?

ಮಾತಲಿ ಬಣ್ಣ ಮನದಲಿ ಸುಣ್ಣ ಕಾಣಾ
ಅರಿಯರಿವರು ಎಂದೆನದಿರಿ ನಮ್ಮ ಕಣಾ
ಮುಚ್ಚಿಲ್ಲ ಇಲ್ಲಾರೂ ತೆರೆದಿರುವರು ಕಣ್ಣಾ
ಒಮ್ಮೆ ತೆರೆದು ನೋಡಿರಿ ಜಗವನು ಅಣ್ಣಾ

ಹೋಳಿಯಿಂದ ಏಳಿಗೆ ನಿಮಗಾಗಿ ಕಾದಿದೆ
ಸ್ವಾರ್ಥದ ಮನಗಳು ರಂಗು ಮೆತ್ತಿ ನಿಂತಿವೆ
ಅರಿತವರು ಅರಿಯನಕೆ ತಿಳಿ ಹೇಳಬೇಕಿದೆ
ಗೊತ್ತಿದ್ದು ಸತ್ತವರಂತೆ ಬದುಕಿ ಫಲವೇನಿದೆ 

ಏಕ ದಿನಕೆ ಬಳಿದರು ಮೊಗಕೆ ನಾನಾ ರಂಗು 
ನಿತ್ಯ ತಪಕೆ ಉಳಿದರು ತಿಳಿದೇ ತಿಂದು ಇಂಗು
ತೊರೆದು ಹೊರ ಬನ್ನಿ ದುಷ್ಟ ರಂಗಗಳ ಹಂಗು
ಬದುಕು ಅರಳಲಿ ಭಾವ ಬೆಳೆಯಲಿ ಎಂದಿಗೂ

ವೈಲೇಶ ಪಿ ಯೆಸ್ ಕೊಡಗು
೨/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ