ಗಝಲ್ : ೨೦

ಗಝ಼ಲ್ : ೨೦
~~~~~~~~
ಅನ್ನ ಕದ್ದವರ ಬೆನ್ನು ಮುರಿವಂತೆ ಬಡಿದು ಕೊಲ್ಲುವರು ಎತ್ತ ಸಾಗಿದೆ ಜಗತ್ತು.
ಹೊನ್ನು ಲೂಟಿ ಹೊಡೆದರೆ ಚಿನ್ನ ಚೆನ್ನು ಎಂದೆನ್ನುವರು ಎತ್ತ ಸಾಗಿದೆ ಜಗತ್ತು?

ಅಪ್ಪನ ಬಲದಿಂದ ಜಗವ ಬೆಪ್ಪು ಮಾಡ ಹೊರಟಿಹರು ತಿದ್ದುವವರನು ಕಾಣೆ
ತಿದ್ದಬೇಕಾದವರು ಮುದ್ದುಗರೆಯುತ ಮುಗ್ದರಂತಾಗಿಹರು ಎತ್ತ ಸಾಗಿದೆ ಜಗತ್ತು?

ಕಾಮದಾ ಕೋಟಲೆಗೆ ಧರಿಸಿದ ವಸನವು ಮುಖ್ಯ ಕಾರಣವೆನುವ ಕಾಮುಕರು
ಎರಡು ವರುಷದ ಹಸುಳೆಯ ಅತ್ಯಾಚಾರವನೆಸಗುವರು ಎತ್ತ ಸಾಗಿದೆ ಜಗತ್ತು?

ಗೆಳೆತನಕೆ ಬೆಲೆಯುಂಟು ಬಳಕೆಗೆ ಮಿತಿಯುಂಟು ಅರಿತಿರಲಿ ಗೆಳೆತನದ ಗರಿಮೆ
ಸ್ನೇಹದಾ ನೆಪದಲಿ ಮರಾ ಮೋಸವನು ಗೈದಿಹ ದರುಳರು ಎತ್ತ ಸಾಗಿದೆ ಜಗತ್ತು?

ಹಿರಿಯರಿಗೆ ಗೌರವವ ನೀಡಲು ಮರೆಯದಿರಿ ಎನಲು‌ ಸಾದುವೇ ಇಂದಿನ ಜಗದಿ
ಕಾಲ್ತುಳಿದು ಮತ್ತವರೇ ಕೆಂಗಣ್ಣು ಬಿಟ್ಟು ನಮ್ಮ ದಿಟ್ಟಿಸುವರು ಎತ್ತ ಸಾಗಿದೆ ಜಗತ್ತು?

ಭರಪೂರ ಚಿಂತಿಸಿದರೂ ಬಗೆ ಹರಿಯದ ಬಲು ಬವಣೆಗಳ ಸಂತೆಯಾಗಿದೆ ಮನ
"ಸಿಡಿಲು" ರು ಕಂತೆ ಒಗೆಯುವ ಮುನ್ನ ಕರಗಬಹುದೆನ್ನುವರು ಎತ್ತ ಸಾಗಿದೆ ಜಗತ್ತು?

ವೈಲೇಶ ಪಿ ಯೆಸ್ ಕೊಡಗು.
೨/೩/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ