ಮರೆಯಾಗಿರಿ
ಮರೆಯಾಗಿರಿ
~~~~~~~
ದೇಶ ಬೇಡ ಕೋಶ ಬೇಡ ಎಂದವನ
ಅಭಿಷೇಕ ನಡೆದಿದೆ ನಗುತಿಹನು ಜಿನ
ಮುನಿ ನಮ್ಮವರ ಕಂಡು ಹಾಲು ಹೈನ
ಬಣ್ಣ ಬಣ್ಣದೋಕುಳಿಯ ಜೈನ ಮಜ್ಜನ
ಸೋದರನ ಆಸ್ತಿಯ ಆಸೆಗೆ ಸೋಲಿಸಿದ
ತನ್ನ ಮನದಾಸೆಯ. ಮನದಿ ಮರುಗಿದ
ಮಡಿದ ಮನುಜ ಹೆಣವ ತಾ ನೋಡಿದ.
ಮಣ್ಣೊಳು ಮಣ್ಣಾಗುವ ತನುವಿದೆಂದ
ತನ್ನದಲ್ಲದ ತನುವಿಗೆ ವಸನ ವಗೈರೆಯೇಕೆ
ಇಳೆಗೆ ಇಳಿವ ಒಡಲಿಗೆ ಅಹಂಕಾರವೇಕೆ
ಪಂಡಿತ ಪಾಮರರು ಅರಿಯದಾದಿರೇಕೆ
ಆತನ ಪಾಡಿಗವನ ಸುಮ್ಮನೆ ಬಿಡರೇಕೆ
ಅಬ್ಬಾ ಇಂದಿಗಾದರೂ ಮುಗಿಯಿತೇ
ಹನ್ನೆರಡು ವರ್ಷ ನೆಮ್ಮದಿ ಕಾಣಬಹುದೇ
ಜನಜಂಗುಳಿ ಗೌಜು ಗದ್ದಲ ಕಳೆಯಿತೇ
ಬಿಟ್ಟು ಬಿಡಿ ಹತ್ತಿರ ಮತ್ತೆ ಸುಳಿಯದೇ
ಜಿನನು ಶುದ್ಧ ಮನದಿ ಧ್ಯಾನಗೈಯಲಿ
ನಮ್ಮಯ ತಮವು ಉರಿದು ಹೋಗಲಿ
ಎಂದ ಬುದ್ಧಗೆ ಶಾಂತಿಯು ದೊರೆಯಲಿ
ಬನ್ನಿ ಸ್ವಲ್ಪ ದೂರ ನಿಲ್ಲುವ ಮರೆಯಲಿ
ವೈಲೇಶ ಪಿ ಯೆಸ್ ಕೊಡಗು
೨೭/೨/೨೦೧೮
Comments
Post a Comment