ಗಝ಼ಲ್ : ೧೭
ಗಝ಼ಲ್ : ೧೭
~~~~~~~~
ಅಮ್ಮನಿಗಾಗಿ ಕಾಯುತಿದ್ದೆ ಹಾಲೂಡಿಸಲೆಂದು ಹಸಿವು ತಾಳದೇ
ಆಯಾಳಿಗಾಗಿ ಕಾದಿರುವೆ ತಿನಿಸ ಬರುವಳೆಂದು ಹಸಿವು ತಾಳದೇ
ಮರಿ ಹಕ್ಕಿಯದು ಕೊಕ್ಕು ತೆರೆದಿದೆ ತಾಯಿ ಗುಟುಕು ತರುವಳೆಂದು
ತನ್ನದೇ ಬಳಗದೊಂದಿಗೆ ಹಂಚಿ ತಿನ್ನಬಹುದೆಂದು ಹಸಿವು ತಾಳದೇ
ಕರು ಮತ್ತೆ ಎಡತಾಕುತ್ತಿದೆ ಎಡ ಬಲವೆನ್ನದೆಲೆ ಹಸುವಿನ ಸುತ್ತಲೂ
ನೊರೆ ಹಾಲ ತನಗೆಂದೇ ಮುಡಿಪಾಗಿರಿಸಿಹಳೆಂದು ಹಸಿವು ತಾಳದೇ
ಮಳೆಯ ರಭಸಕೆ ಹೂವಿನ ಪಕಳೆಗಳುದುರಿ ಮಧುವಿಲ್ಲದೇ ದುಂಬಿ
ಹೂವಿಂದ ಹೂವಿಗೆ ಹಾರುತಿದೆ ಮಕರಂದಕ್ಕೆಂದು ಹಸಿವು ತಾಳದೇ
ಪ್ರವಾಹದ ನಡುವೆ ಸಿಲುಕಿದ ಸಿರಿವಂತ ಹಣದ ತೈಲಿಯ ಮರೆತಿರುವ
ಆಕಾಶ ದಿಟ್ಟಸಿ ನೋಡಿಹನು ಅನ್ನದ ಪೊಟ್ಟಣಕೆಂದು ಹಸಿವು ತಾಳದೇ
ಕರ್ತವ್ಯದ ಕರೆಗೆಂದು ಬಂದವನೆ "ಸಿಡಿಲು" ನು ಹಬ್ಬದೂಟವ ಮರೆತು
ದಿಟ್ಟಿಸಿ ಕೊರಗುತ ಹಬ್ಬಕೆ ಹೋಟೆಲ್ ಮುಚ್ಚಿದರೆಂದು ಹಸಿವು ತಾಳದೇ
ವೈಲೇಶ ಪಿ ಯೆಸ್ ಕೊಡಗು
೨೦/೨/೨೦೧೮
Comments
Post a Comment