ನವ ಮನ್ವಂತರ
ನವ ಮನ್ವಂತರ
~~~~~~~~
ಮಾಮರದ ಚಿಗುರಲಿ ಅವಿತವಿತು
ಕೋಗಿಲೆ ಕುಹೂ ರಾಗವ ಪಾಡುತಿದೆ
ಏಳಿ ಎದ್ದೇಳಿ ನವ ಯುಗವು ಒಳಿತು
ಮಾಡಲೆಂದೇ ಗಾನಸುಧೆ ಬಂತೆಂದಿದೆ
ಹೊಂಗೆಯ ಟೊಂಗೆಯಲಿ ಅರಳಿದ
ಹೂವುಗಳೆದೆಯಲಿ ಭೃಂಗದ ಸಂಗದ
ನಾದ ನಿನಾದ ಪ್ರಣಯದ ಪಿಸುಮಾತು
ಮಧುರಸವ ಹೀರಿ ಹಿಗ್ಗಿದೆ ಮನಸೋತು
ಮನೆ ಮುಂದಿನ ಮಲ್ಲಿಗೆಯ ಘಮಲಿಗೆ
ನಾಸಿಕವು ನಾನು ನಾನೆನುತ ಅರಳುತಿದೆ
ಎಳೆಯ ಬಿಸಿಲಿನ ಸೊಬಗಿಗೆ ಚೆಲುವಕ್ಕಿ
ಹಾರಿದೆ ನಗುನಗುತಾ ಹೂವಿಂದ ಹೂವಿಗೆ
ನವಯುಗದ ಆದಿಗೆ ನವ ಮನ್ವಂತರವು
ಅರಳಿ ಮನದ ಮೂಸೆಯಲಿ ನವ ಬಲವು
ಮೂಡಿಬರಲಿ. ಅಳಿಯಲಿ ಜಗದ ತಮವು
ಹೊಳೆಯಲಿ ಸಕಲ ಜೀವಿಗಳ ತನು ಮನವು
ವೈಲೇಶ ಪಿ ಯೆಸ್ ಕೊಡಗು
೧೨/೩/೨೦೧೮
Comments
Post a Comment