ಶಿರಾಡಿ ಘಾಟ್'ನ ಬಂದ್'ಗೆ ಬಲಿ
ಶಿರಾಡಿ ಘಾಟ್'ನ ಬಂದ್'ಗೆ ಬಲಿ
~~~~~~~~~~~~~~~~~
ಶಿರಾಡಿ ಘಾಟ್'ನ ಬಂದ್'ನ ಕೊಡುಗೆ
ಎರಡು ಜೀವದ ಹರಣಕೆ ಹೂರಣ ಕೊನೆಗೆ
ಹದಿನೈದರ ದಾಂಪತ್ಯ ಬೆಂದಿತು ಬೆಂಕಿಯೊಳಗೆ
ಅರಸಿದರೆ ಅಪ್ಪ ಬರಲಾರ ಹದಿಹರೆಯದ ಮಕ್ಕಳಿಗೆ
ಅದೇನೇನು ಆಸೆಯಿತ್ತೋ ಮನದೊಳಗೆ
ಅದಕ್ಕೇ ನಿತ್ಯ ಸತ್ಯದ ದುಡಿಮೆ ಸಂಸ್ಥೆಯೊಳಗೆ
ಮನೆ ಮಾರು ಮಡದಿ ಮಕ್ಕಳ ದಿವ್ಯ ಭವ್ಯದೆಡೆಗೆ
ಕೊಂಡೊಯ್ದು ದಡ ಮುಟ್ಟಿಸಲಾಗಲಿಲ್ಲ ಕೊನೆವರೆಗೆ
ಇನ್ನೊಬ್ಬಾತನ ಮನದಿಂಗಿತ ಬಲ್ಲವರಾರು
ಇದ್ದಕ್ಕಿದ್ದಂತೆ ಎದ್ದು ನಡೆದೇ ಬಿಟ್ಟವರು ಇಬ್ಬರು
ಇರಲಿ ಬದುಕಿನ ಕಳ್ಳ ಹೆಜ್ಜೆಗಳನು ಅರಿತವರಾರು
ತಾ ಕುಳಿತ ಜವಾಬುದಾರಿ ಸ್ಥಾನವನರಿಯದಾದರು
ಕುಲಕೆ ಕೆಡುಕು ಸಂಸ್ಥೆಗೆ ಕುಟುಕು ಜೀವನ ಚುಟುಕು
ಲಕ್ಷ ಕೋಟಿ ಕೊಟ್ಟರು ಮನೆಯ ಮೇಟಿ ಸಿಗಲಾರರು
ಹದ ಮೀರಿ ಹದ್ದು ಮೀರಿದ ಬೃಹತ್ ವಾಹನ ಕದರು
ಅವಸರಕೆ ಸಿಕ್ಕಿ ಯಮನೂರಿನೆಡೆ ಬರಿದೇ ನಡೆದರು
ಬಾಳ ಕೊನೆಗೆ ಜತೆಗೆ ಏನೂ ಯಾವುದೂ ಬಾರದು
ಅರಿಯದೇ ಬರುವ ನಾವು ತಿಳಿಸದೇ ಹೋಗುವುದು ಮಿಕ್ಕುಳಿದ ಬಂಧಗಳ ಬಂಧನ ಬವಣೆ ಉಳಿಯದು
ಧರೆಯ ಕರೆಯ ಮರೆಯದೇ ಮರಳಿ ಬಾರದೆ ನಡೆದು
ವೈಲೇಶ ಪಿ ಯೆಸ್ ಕೊಡಗು
೯/೨/೨೦೧೮
Comments
Post a Comment