ಲೇಖನ ಸ್ಪರ್ಧೆಗಾಗಿ(ಜಾಲತಾಣ)
ಜಾಲತಾಣ. ಕೌಟುಂಬಿಕ ವ್ಯವಸ್ಥೆಯ ಮೇಲೆ ಬೀರಿರುವ ಪರಿಣಾಮಗಳು.
ಇತ್ತೀಚಿನ ದಿನಮಾನಗಳಲ್ಲಿ ಜಾಲತಾಣ ಎಂಬ ಮಾಯಾಜಾಲ ಜಗತ್ತಿನ ಎಲ್ಲರ ಬಾಳಿನಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದೆ ಎನ್ನಬಹುದು. ಜೊತೆಗೆ ಮಹತ್ತರ ಪಾಠಗಳನ್ನು ಎಂಬುದರಲ್ಲಿ ಎರಡು ಮಾತಿಲ್ಲ ಅಲ್ಲವೇ ಕೌಟುಂಬಿಕವಾಗಿ ಇದರ ಪರಿಣಾಮ ಎಂದರೆ ಎಲ್ಲೋ ಕೇವಲ ಕೆಲವರು ಸದುಪಯೋಗ ಪಡಿಸಿಕೊಂಡು ಕೌಟುಂಬಿಕ ಜೀವನದ ನೆಮ್ಮದಿ ಕಂಡಿರಬಹುದು ಇಂದು ಹೆಚ್ಚಿನ ಯುವ ಸಮೂಹದ ಮಾಧ್ಯಮ ಜಾಲತಾಣ ಎಂದರೆ ತಪ್ಪಾಗಲಾರದು. ಅದರಲ್ಲಿ ಮೋಸ ವಂಚನೆಗೆ ಸಿಲುಕಿ ಮನೆ ಮನ ಹಾಳು ಮಾಡಿಕೊಂಡವರು ಕಡಿಮೆ ಏನಿಲ್ಲ.
ಜಾಲತಾಣವನ್ನು ಉಪಯುಕ್ತವಾಗಿ ಉಪಯೋಗಿಸುವ ನಮ್ಮ ಸಾಮರ್ಥ್ಯ ಹಾಗೂ ಆಯ್ಕೆಯ ಅನುಸಾರ ಕೌಟುಂಬಿಕ ವ್ಯವಸ್ಥೆಯ ಮೇಲೆ ಪರಿಣಾಮವನ್ನು ಬೀರುತ್ತದೆ. ಉದಾ: ಫೇಸ್‌ಬುಕ್ ವಾಟ್ಸ್ ಆಪ್ ನಿಂದಾದ ಲವ್ ಇದರಿಂದಾಗಿ ಮೋಸ ಹೋಗಿ ಹಣ ಯೌವನ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡವರು. ಯುವಜನತೆ ಬ್ಲೂ ವೇಲ್ ನಂತಹ ಆಟಕ್ಕೆ ಅಡಿಯಾಳಾಗಿ ಪ್ರಾಣ ಕಳೆದುಕೊಂಡವರು ಈ ಕಾರಣದಿಂದಾಗಿ ಅವರ ಕುಟುಂಬಕ್ಕೆ ಆದ ನಷ್ಟ ನೋವು ಸಂಕಟ ಕಡಿಮೆ ಏನಲ್ಲ. ಚಿಕ್ಕ ಪುಟ್ಟ ವಯಸ್ಸಿನ ಮಕ್ಕಳಷ್ಟೇ ಅಲ್ಲದೇ ಗಂಡು ಹೆಣ್ಣೆಂಬ ಬೇಧ ಭಾವವಿಲ್ಲದೆ ಯುವಜನತೆ, ವಯಸ್ಕರು ಸಹಾ ದೃಶ್ಯ ಮಾಧ್ಯಮದ ಮೂಲಕ ವಯಸ್ಸಿಗೆ ಮೀರಿದ, ಸಭ್ಯತೆಗೆ ಮೀರಿದ ಕಾಮ ಪ್ರಚೋದಕ, ಕ್ರೌರ್ಯ ಪ್ರಚೋದಕ, ಕೋಮು ವಿಚಾರ ಪ್ರಚೋದಕ, ಆಡಿಯೋ ವೀಡಿಯೋಗಳ ವೀಕ್ಷಣೆಯಿಂದ ನಡೆಯುತ್ತಿರುವ ಅನಾಹುತಗಳು ಅಡ್ಡ ಪರಿಣಾಮಗಳು ಕುಟುಂಬದ ನೆಮ್ಮದಿ ಹಾಳು ಮಾಡುತ್ತಿವೆ ಎನ್ನಬಹುದು.
ಜಾಲತಾಣದ ಲಬ್ದಗಳಾದ ಫೇಸ್‌ಬುಕ್, ವಾಟ್ಸ್ ಆಪ್, ಹೈಕ್ ಮತ್ತಿತರ ಅ್ಯಪ್ಗಳ ದುರುಪಯೋಗದ ಪರಿಣಾಮದಿಂದಾಗಿ ಅದೆಷ್ಟೋ ದಂಪತಿಗಳಲ್ಲಿ ಒಡ ಮೂಡುತ್ತಿರುವ ಸರಸ ವಿರಸದ ಮೂಲಕಾರಣ. ಇದೇ ಕಾರಣಕ್ಕಾಗಿ ವಿಚ್ಛೇದನ, ಕೊಲೆಯಂತಹ ಕೃತ್ಯಗಳು ಕೂಡ ನಡೆದು ಕೌಟುಂಬಿಕ ನೆಮ್ಮದಿಗೆ ಮಾರಕವಾಗಿದೆ. ಪ್ರೀತಿ ಪ್ರೇಮ ಪ್ರಣಯ ಪ್ರಸಂಗಗಳಿಗೂ ಕೂಡ ಜಾಲತಾಣದ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸುತ್ತಿದೆ.
ಜಾಲತಾಣದ ಸದುಪಯೋಗ ಪಡಿಸಿಕೊಂಡು ಕುಟುಂಬದ ಏಳಿಗೆಗಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡುವುದಾದರೆ ಕುಟುಂಬದ ಪಡಿತರ,ಗ್ಯಾಸ್, ಆಧಾರ್ ಕಾರ್ಡ್, ಬ್ಯಾಂಕಿಂಗ್ ವ್ಯವಸ್ಥೆ, ನೌಕರಿ ಬೇಟೆಯ ವ್ಯವಸ್ಥೆ, ಉದ್ಯೋಗ ವಿನಿಮಯ, ವಸ್ತುಗಳ ಖರೀದಿ, ಬಿಕರಿ, ಮನರಂಜನೆ, ಸಂಗೀತ, ಸಾಹಿತ್ಯದ ಬೆಳವಣಿಗೆ, ಸುದ್ದಿ ಕ್ಷಿಪ್ರ ಸಮಾಚಾರ ವಿನಿಮಯ, ಮುಂತಾದ ವ್ಯವಸ್ಥೆ, ಓದು ಬರಹಗಳ ಅನುಕೂಲಕರ ವ್ಯವಸ್ಥೆ, ಇವೆಲ್ಲಕ್ಕೂ ಅಡಿಪಾಯದ ಉಪಾಯವಾಗಿ ಉತ್ತಮ ರೀತಿಯಲ್ಲಿ ಕೌಟುಂಬಿಕ ಭದ್ರತೆಗೆ, ಅಭಿವೃದ್ಧಿಗೆ ಪೂರಕವಾಗಿವೆ ಎನ್ನಬಹುದು.
ಒಟ್ಟಾರೆ ಹೇಳುವುದಾದರೆ ಜಾಲತಾಣ ಎಂಬುದು ಒಂದು ಉಪಯುಕ್ತ ಅತಿ ಶೀಘ್ರದಲ್ಲಿ ಎಲ್ಲರನ್ನೂ ತಲುಪುವ ಮಾಧ್ಯಮ ಎಂಬುದರಲ್ಲಿ ಸಂಶಯವಿಲ್ಲ. ಇದನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಕೌಟುಂಬಿಕ ನೆಮ್ಮದಿಗೆ ಪೂರಕವು ಆಗಬಹುದು ದುರುಪಯೋಗದಿಂದ ಕೌಟುಂಬಿಕ ನೆಮ್ಮದಿಗೆ ಮಾರಕವೂ ಅಗಬಹುದಾಗಿದೆ. ನನ್ನ ಪ್ರಕಾರ ಇವಿಷ್ಟು ಹಾಗೂ ನನ್ನ ಅರಿವಿಗೆ ಬಾರದ ಇನ್ನೂ ಅದೆಷ್ಟೋ ಪ್ರಭಾವವನ್ನು ಕೌಟುಂಬಿಕ ವ್ಯವಸ್ಥೆಯ ಮೇಲೆ ಬೀರಿರುವ ಸಾಧ್ಯತೆಗಳು ಇದೆ.
ವೈಲೇಶ ಪಿ ಯೆಸ್ ಕೊಡಗು
೭/೨/೨೦೧೮
Comments
Post a Comment