ಶಿರಾಡಿ ಘಾಟ್

ಮಿತ್ರಾತ್ಮೀಯರೇ ಇತ್ತೀಚೆಗೆ ಹೆಚ್ಚಾಗಿರುವ ವಾಟ್ಸ್ ಆಪ್ ಬಳಗ. ಅದರಲ್ಲಿ ಬರಹ ಓದು. ಬಂಧುಗಳ ಮದುವೆ ಮುಂಜಿ ಮುಂತಾದ ಓಡಾಟ ಜೊತೆಗೆ ಕರ್ತವ್ಯದ ಕಾರಣದಿಂದಾಗಿ ಫೇಸ್‌ಬುಕ್‌ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಫೇಸ್‌ಬುಕ್‌ ನಿಂದ ನಿರ್ಗಮಿಸುವ ಮನಸ್ಸು ಇಲ್ಲ.

                 ಈ ಎಲ್ಲದರ ನಡುವೆ ನಿನ್ನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದ ಅಪಘಾತದಲ್ಲಿ ಮಡಿದ ಇರ್ವರು ಚಾಲಕರ ಆತ್ಮಕ್ಕೆ ಶಾಂತಿ ಕೋರುತ್ತಾ. ರಾಷ್ಟ್ರೀಯ ಹೆದ್ದಾರಿ ೨೭೬ ರಲ್ಲಿ  ಹೆಚ್ಚಾಗುತ್ತಿರುವ ಭಾರೀ ಭಾರದ ವಾಹನ ಸಂಚಾರ ಮಲ್ಟಿ ಎಕ್ಸೆಲ್ ವಾಹನಗಳು. ರಸ್ತೆಯ ಸಾಮರ್ಥ್ಯವನ್ನು ಮೀರಿದ ಅನಿಯಂತ್ರಿತ ವಾಹನಗಳ ಓಡಾಟ ಇದರಿಂದಾಗಿ ನಡೆಯುತ್ತಿರುವ ಅಪಘಾತ. ಇದಕ್ಕೆಂತು‌ ಪರಿಹಾರ.

ಶಿರಾಡಿ ಘಾಟ್'ನ ಬಂದ್'ಗೆ ಬಲಿ
~~~~~~~~~~~~~~~~~
ಶಿರಾಡಿ ಘಾಟ್'ನ ಬಂದ್'ನ ಕೊಡುಗೆ
ಎರಡು ಜೀವದ ಹರಣಕೆ ಹೂರಣ ಕೊನೆಗೆ
ಹದಿನೈದರ ದಾಂಪತ್ಯ ಬೆಂದಿತು ಬೆಂಕಿಯೊಳಗೆ
ಅರಸಿದರೆ ಅಪ್ಪ ಬರಲಾರ ಹದಿಹರೆಯದ ಮಕ್ಕಳಿಗೆ

ಅದೇನೇನು ಆಸೆಯಿತ್ತೋ ಮನದೊಳಗೆ
ಅದಕ್ಕೇ ನಿತ್ಯ ಸತ್ಯದ ದುಡಿಮೆ ಸಂಸ್ಥೆಯೊಳಗೆ
ಮನೆ ಮಾರು ಮಡದಿ ಮಕ್ಕಳ ದಿವ್ಯ ಭವ್ಯದೆಡೆಗೆ
ಕೊಂಡೊಯ್ದು ದಡ ಮುಟ್ಟಿಸಲಾಗಲಿಲ್ಲ ಕೊನೆವರೆಗೆ

ಇನ್ನೊಬ್ಬಾತನ ಮನದಿಂಗಿತ ಬಲ್ಲವರಾರು
ಇದ್ದಕ್ಕಿದ್ದಂತೆ ಎದ್ದು ನಡೆದೇ ಬಿಟ್ಟವರು ಇಬ್ಬರು
ಇರಲಿ ಬದುಕಿನ ಕಳ್ಳ ಹೆಜ್ಜೆಗಳನು ಅರಿತವರಾರು
ತಾ ಕುಳಿತ ಜವಾಬುದಾರಿ ಸ್ಥಾನವನರಿಯದಾದರು

ಕುಲಕೆ ಕೆಡುಕು ಸಂಸ್ಥೆಗೆ ಕುಟುಕು ಜೀವನ ಚುಟುಕು
ಲಕ್ಷ ಕೋಟಿ ಕೊಟ್ಟರು ಮನೆಯ ಮೇಟಿ ಸಿಗಲಾರರು
ಹದ ಮೀರಿ ಹದ್ದು ಮೀರಿದ ಬೃಹತ್ ವಾಹನ ಕದರು
ಅವಸರಕೆ ಸಿಕ್ಕಿ ಯಮನೂರಿನೆಡೆ ಬರಿಇ ಬಯದೇ ನಡೆದರು

ಬಾಳ ಕೊನೆಗೆ ಜತೆಗೆ ಏನೂ ಯಾವುದೂ ಬಾರದು
ಅರಿಯದೇ ಬರುವ ನಾವು ತಿಳಿಸದೇ ಹೋಗುವುದು ಮಿಕ್ಕುಳಿದ ಬಂಧಗಳ ಬಂಧನ ಬವಣೆ ಉಳಿಯದು
ಧರೆಯ ಕರೆಯ ಮರೆಯದೇ ಮರಳಿ ಬಾರದೆ ನಡೆದು

ವೈಲೇಶ ಪಿ ಯೆಸ್ ಕೊಡಗು
೯/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ