ಇದುವೇ ಜೀವನ ನೈಜ ಘಟನೆ
ಇದುವೆ ಜೀವನ
=============
ಇದೊಂದು ಅವಿಸ್ಮರಣೀಯ ಪ್ರಸಂಗ ಆರೇಳು ವರ್ಷದ ಹಿಂದೆ ನಡೆದ ಘಟನೆ. ಎಂದಿನಂತೆ ವಿರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ 10:30 ಗಂಟೆಗೆ ವಿರಾಜಪೇಟೆ ಬೆಂಗಳೂರು ಬಸ್ ಚಾಲಕನಾಗಿ ತೆರಳುತಿದ್ದೆ . ಅಂದು ನಡೆದ ಘಟನೆಯಿಂದ ಬೇಸತ್ತು ಇನ್ಯಾರ್ಯರು ಕರೆ ಮಾಡಿ ತಲೆ ತಿನ್ನುವರೋ ಅಷ್ಟೇ ಆದರೆ ಪರವಾಗಿಲ್ಲ ರಾತ್ರಿ ಮತ್ತೆ ವಾಪಸ್ಸು ಕರ್ತವ್ಯ ಮುಖೇನ ಮಡಿಕೇರಿಗೆ ತೆರಳಬೇಕಿದೆ ಎಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದೆ. ಮನಸ್ಸಿಗಾದ ಬೇಸರದಿಂದ ತಿಂಡಿ ಕೂಡ ಮಾಡಿರಲಿಲ್ಲ. ಶಾರೀರಿಕ ಶ್ರಮದ ಪರಿಣಾಮವಾಗಿ ನಿದ್ದೆಗೆ ತಡವಾಗಿ ಜಾರಿದಂವ ಎದ್ದಾಗ ಮಧ್ಯಾಹ್ನ 1 ಗಂಟೆ ಎದ್ದು ಸ್ವಿಚ್ ಆನ್ ಮಾಡಿದರೇ ನೂರು ಮಿಸ್ಕಾಲ್ ನೂರಾರು ಮೆಸೇಜು.
ಇಲ್ಲಿ ನಮ್ಮೂರಿನಲ್ಲಿ ನನ್ನ ಆತ್ಮೀಯ ಗೆಳೆಯನ ಮನೆಯ ಬಳಿ ಬಂದ ಸುದ್ದಿಯ ಪ್ರಕಾರ ರಾತ್ರಿ
10:15ಕ್ಕೆ ವಿರಾಜಪೇಟೆಯಿಂದ ಹೊರಟ ಬಸ್ ಅಪಘಾತಕ್ಕೆ ಈಡಾಗಿ ಚಾಲಕ ನಿರ್ವಾಹಕರಾದಿಯಾಗಿ ಆರೇಳು ಜನರು ನಿಧನರಾಗಿದ್ದಾರೆ. ಅದರಲ್ಲಿ ನನ್ನ ಗೆಳೆಯನ ನೆರೆಮನೆಯವರ ಬಂಧುಗಳ ಪೈಕಿ ಒಬ್ಬರು ಮೃತರಾಗಿದ್ದಾರೆ.
ನನ್ನ ಗೆಳೆಯನ ಗ್ರಹಿಕೆ ಏನಿತ್ತೋ. ಇದೆ ಸರಿ ಹೀಗೇ ಆಗಿದೆ. ಎಂದುಕೊಂಡವನೇ ನನಗೆ ಫೋನ್ ಹಚ್ಚಿಯೇ ಬಿಟ್ಟ ನನ್ನ ಫೋನ್ ಸ್ವಿಚ್ ಆಫ್. ಕೂಡಲೇ ನನ್ನ ಚೆಡ್ಡಿ ಧೋಸ್ತಿಗೆ ಫೋನ್ ಮಾಡಿದ್ದಾನೆ. ಆ ಕಡೆಯಿಂದ ಹಲೋ ಹೇಗಿದ್ದೀರಾ ಎಂಬ ಉತ್ತರ ಈತ ನಾನಿರೋದು ಹಾಗಿರಲಿ. ಹೀಗಾಗಿದೆ ಏನು ಮಾಡುವುದು ಎಂದು ಹೇಳಿದರು ಮೊದಲ ಮಿತ್ರ.
ಎರಡನೇ ಮಿತ್ರ ಈಗಾಗಲೇ 20ಕಿಮೀ ದೂರದಲ್ಲಿ ಮಾಡಿಸುತಿದ್ದ ಕೆಲಸ ಬಿಟ್ಟು ಬೈಕ್ ಏರಿ ಬಂದೇ ಬಿಟ್ಟ. ಸರಿ ಇಬ್ಬರು ಸೇರಿ ಅದೇನೋ ತೀರ್ಮಾನ ಮಾಡಿಕೊಂಡು ನಮ್ಮ ಮನೆಯ ಲ್ಯಾಂಡ್ ಲೈನಿಗೆ ಫೋನ್ ಮಾಡಿದ್ದಾರೆ.
ಆ ಕಡೆಯಿಂದ ಹಲೋ ವೈಲೇಶ ಇದಾರಾ?
ಈ ಕಡೆಯಿಂದ ಇಲ್ಲಣ್ಣ ಡ್ಯೂಟಿಗೆ ಹೋಗಿದ್ದಾರೆ ಯಾಕಣ್ಣಾ ಏನಾಯ್ತು ಎಂದು ನನ್ನಾಕೆ ಏನರಿಯದೇ ಕೇಳಿದ್ದಾರೆ.
ಗೆಳೆಯ : ಏನಿಲ್ಲ ಪೋನ್ ಮಾಡಿದ್ರಾ
ನನ್ನಾಕೆ : ಹಂ ಅಣ್ಣಾ ರಾತ್ರಿ ಮಾಡಿದ್ದರು ಈಗ ಮಾಡಿಲ್ಲ ಇನ್ನೇನು ಫೋನ್ ಮಾಡಬಹುದು. ನಾನು ಮಗಳನ್ನು ಕರೆದುಕೊಂಡು ಶಾಲೆಗೆ ಹೋಗಬೇಕು ಅಂತ ಹೇಳಿದ್ದಾರೆ.
ಅದಕ್ಕೆ ಗೆಳೆಯರು ಸರಿ ನೀವು ಮನೆಯಲ್ಲಿಯೇ ಇರಿ ನಾವು ಬರುತ್ತೇವೆ ಎಂದು ಹೇಳಿದ್ದಾರೆ.
ನನ್ನ ಗೆಳೆಯರು ಹೇಳಿದರುಕೇಳದೇ ಮನೆಯಲ್ಲಿದ್ದ ಮಗಳನ್ನು ಜೊತೆಗೆ ಕರೆದು ಕೊಂಡು ಶಾಲೆಯ ಕಡೆಗೆ ಹೊರಟುಬಂದಿದ್ದಾರೆ ಅರ್ದ ದಾರಿಗೆ ಬಂದಾಗ ಗೆಳೆಯರಿಬ್ಬರೂ ಬಾಡಿಗೆಯ ಕಾರಿಗೆ ಫೋನಾಯಿಸಿ ಬೈಕಿನಲ್ಲಿ ಶಾಲೆಯ ಕಡೆ ಹೊರಟು ನನ್ನ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ಸಲುವಾಗಿ ಬಂದಿದ್ದಾರೆ.
ದಾರಿಯಲ್ಲಿ ಸಿಕ್ಕಿದ ನನ್ನಾಕೆಗೆ ನೀವು ಮನೆಗೆ ಹೋಗಿ ನಾವು ಮಕ್ಕಳನ್ನು ಕರೆತರುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಏನೋ ಒಗಟು ಗುಟ್ಟು ಅದೇನೆಂದು ಬಿಡಿಸಿ ಹೇಳಿ ಇಲ್ಲದೆ ಇದ್ದರೆ ನಾನು ಮನೆಗೆ ಹೋಗುವುದಿಲ್ಲ ಎಂದು ನನ್ನಾಕೆ ಹಠ ಮಾಡಿ ಕೇಳಿದಾಗ ವಿಧಿಯಿಲ್ಲದೇ ಗೆಳೆಯರು ರಾತ್ರಿ 10:30ಗೆ ಹೊರಟ ಬಸ್ ಅಪಘಾತಕ್ಕೆ ಈಡಾಗಿ ಚಾಲಕ ನಿರ್ವಾಹಕರಾದಿಯಾಗಿ ಆರೇಳು ಜನರು ನಿಧನರಾದರು ಎಂದಿದ್ದಾರೆ.
ನನ್ನಾಕೆಗೆ ಪ್ರಜ್ಞೆ ತಪ್ಪಿದೆ ಮತ್ತೆ ಸಾವರಿಸಿಕೊಂಡು ಜೊತೆಗಿದ್ದ ಮಗಳನ್ನುಕರೆದು ಕೊಂಡು ಶಾಲೆಯ ಕಡೆ ಹೊರಟು ಬಂದಿದ್ದಾರೆ. ಮಗನ ಶಾಲೆಯ ನನ್ನ ಶಿಕ್ಷಕ ಮಿತ್ರರು ವಿಚಾರ ತಿಳಿದು ಮಗನನ್ನು ಕರೆದು ಕೊಂಡು ಬಂದಿದ್ದಾರೆ. ಅಮ್ಮನ ಸ್ಥಿತಿಯಿಂದ ವಿಚಾರಿಸಲಾಗಿ ವಿಷಯ ತಿಳಿದಿದೆ ಅವನು ಕಿಟ್ಟನೆ ಕಿರುಚುತ್ತಾನೆ ಅಪ್ಪ ಬೇಕೆಂದು ಅಳುತ್ತಾನೆ.
ಈ ಕಡೆ ಪತ್ನಿ ಮಗ ಮಗಳು ಅಳುತ್ತಿದ್ದಾರೆ ಸ್ನೇಹಿತರು ಇಬ್ಬರೂ ಅಳುತ್ತಿದ್ದಾರೆ ಶಾಲೆಯಲ್ಲಿ ಗುಂಪು ಸೇರಿದೆ ಶಿಕ್ಷಕರು ಸಮಾಧಾನ ಪಡಿಸುತ್ತಿದ್ದಾರೆ.
ಈ ಕಡೆ ನಮ್ಮ ಮನೆಯ ಸುತ್ತಮುತ್ತಲಿನ ಗ್ರಾಮದ ಜನರು ಪಟ್ಟಣದ ಮಿತ್ರಾತ್ಮೀಯರು ನಮ್ಮ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ ಅದಾಗಲೇ ಬಂಧುಗಳಿಗೆ ದೂರವಾಣಿ ಕರೆ ಹೋಗಿಯಾಗಿದೆ.
ಅಷ್ಟರಲ್ಲಿ ಬಾಡಿಗೆಯ ಕಾರು ಆಗಮಿಸಿದೆ. ಕಾರು ಹತ್ತಿದ ಗೆಳೆಯರೆಲ್ಲ ಚೆನ್ನಪಟ್ಟಣದ ಹಾದಿ ಹಿಡಿದಿದ್ದಾರೆ. ಕಾರಿನಲ್ಲಿದ್ದ ಯಾರಿಗೋ ನೆನಪಾಗಿ ವಿರಾಜಪೇಟೆಯ ಬಸ್ ನಿಲ್ದಾಣದಲ್ಲಿ ಒಮ್ಮೆ ವಿಚಾರಿಸಿ ಮುಂದೆ ಹೋಗುವ ಎಂದಿದ್ದಾರೆ. ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರು ಇಲ್ಲ ಅದು 10:30ರ ಮಡಿಕೇರಿ ಘಟಕದ ಬಸ್ ಅಲ್ಲ ಬೆಂಗಳೂರು ಘಟಕದ 10:15ರ ಬಸ್ ಎಂದಿದ್ದಾರೆ. ಅದೇ ಕಾರಿನಲ್ಲಿ ವಾಪಸ್ಸು ಶಾಲೆಗೆ ಬರುವುದೂ ನನ್ನ ಮೊಬೈಲಿಗೆ ಬಂದ ಕರೆಯನ್ನು ನಾನು ಸ್ವೀಕರಿಸಿ ಮಾತನಾಡುವುದೂ ಏಕ ಕಾಲದಲ್ಲಿ ಸಂಭವಿಸಿದೆ ಅಲ್ಲಿಗೆ ಎಲ್ಲವೂ ಸುಖಾಂತ್ಯ.
ಈಗ ನಡೆದ ವಿಚಾರ ಅಂದು ವಿರಾಜಪೇಟೆಯಿಂದ 10:15ಕ್ಕೆ ಬಿಟ್ಟ ಬಸ್ ಮೈಸೂರು ದಾಟಿ ಮದ್ದೂರು ಚೆನ್ನಪಟ್ಟಣದ ನಡುವೆ ಚೆನ್ನಪಟ್ಟಣ ಇನ್ನೂ ಮೂರು ಕಿಮೀ ಇದೆ ಎಂಬ ಸ್ಥಳದಲ್ಲಿ ಬಾಲಗೋಪಾಲ ದೇವಾಲಯದ ಬಳಿ ಮುಂಜಾವ 3ರ
ಸಮಯದಲ್ಲಿ ಅಪಘಾತಕ್ಕೀಡಾಗಿತ್ತು. ಅದನ್ನು ನೋಡಿ ಬೆಂಗಳೂರಿಗೆ ಬಂದ ನಾನು ಎಂದೂ ಸ್ವಿಚ್ ಆಫ್ ಮಾಡದಿರುವವ ಅಂದು ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದೆ ಅದೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯಿತು ಇಲ್ಲಿ ಉದ್ದೇಶ ಪೂರ್ವಕವಾಗಿ ಗೆಳೆಯರ ಹೆಸರು ಹಾಕಲಿಲ್ಲ
ಇದು ನಡೆದ ವಿಚಾರ ಮರುದಿನ ಮನೆಗೆ ಬಂದೊಡನೆ ಊರವರು ಬಂಧುಬಳಗಾದಿ ಮನೆಯವರು ಅವರ ಗೋಳು ಜೊತೆಗೆ ಆ ಇಬ್ಬರು ಗೆಳೆಯರು ಕಂಡೊಡನೆ ತಬ್ಬಿ ಬಿಕ್ಕಿ ಬಿಕ್ಕಿ ಅಳುವುದ ನೋಡಿ ಏನು ಹೇಳಬೇಕೆಂದು ತಿಳಿಯದೇ ತಬ್ಬಿಬ್ಬಾಗಿದ್ದವನು ಮೂರು ದಿನಗಳ ಕಾಲ ಕರ್ತವ್ಯದ ಕಡೆಗೆ ಗಮನವಿರಲಿಲ್ಲ.
ಜೊತೆಗೆ ಆರು ತಿಂಗಳ ಕಾಲ ಕಂಡ ಪರಿಚಯದವರಿಗೆ ವಿವರಿಸಿ ಹೇಳುವುದೇ ಆಗಿತ್ತು.
ತಮ್ಮವ
ವೈಲೇಶ ಪಿ ಯೆಸ್
ಕೊಡಗು
7/2/2017
Comments
Post a Comment