ಗಝ಼ಲ್ : ೧೪
ಗಝ಼ಲ್ : ೧೪
~~~~~~~
ನನ್ನ ಕನಸು ಮನಸಲಿ ಬಯಕೆಗಳು ನನಗರಿಯದೇ ಬಹಳವಿತ್ತು
ಎನಗೆ ಮೋಸ ಮಾಡಿ ನಡೆದ ಆಸೆಗಳು ನೀನರಿಯದೇ ಬಹಳವಿತ್ತು.
ಜೋಗದ ಜೀವ ನದಿಯ ಕಾಣ ಹೋದೆವು ಮನ ತುಂಬಿದ ಸಡಗರದಿ
ಮಳೆಯ ರಭಸಕೆ ಉಕ್ಕಿ ಹರಿವ ಪ್ರವಾಹದ ಸೆಳವು ಅಂದೇ ಬಹಳವಿತ್ತು
ಎನ್ನೊಲವ ಗೆಳೆಯರ ಬಹು ನನಸುಗಳ ಸಂಭ್ರಮವ ಕಣ್ಣಾರೆ ಕಂಡೆನು
ಒಡಲೊಳಗೆ ಮೂಡಿದ್ದ ಕನಸುಗಳ ಕನವರಿಕೆಯು ನನ್ನದೇ ಬಹಳವಿತ್ತು
ಮಡಿಕೇರಿ ಮಂಜಿನಲಿ ಮುಂಜಾನೆ ನಡೆದಿದ್ದೆ ರವಿ ಕಿರಣ ಬರುವ ಮುನ್ನ
ರಾಜಾಸೀಟಿನಲಿ ಚೆಲ್ಲಿದ ಮುತ್ತಿನ ಹನಿಗಳ ಅಂದವೆಂಬುದೇ ಬಹಳವಿತ್ತು
"ಸಿಡಿಲು"ನ ಜೀವನ ಹರುಷದ ಹೊನಲಾಗಿ ಹರಿಯಲಿ ಎಂಬುದೇ ಎನ್ನಾಸೆ
ಕಳೆದ ಕಹಿಯಾದ ನೆನಪುಗಳು ಮನತುಂಬಿ ಮರೆಯಲಾರದೇ ಬಹಳವಿತ್ತು
ವೈಲೇಶ ಪಿ ಯೆಸ್ ಕೊಡಗು
೧೦/೨/೨೦೧೮
Comments
Post a Comment