ಸ್ಪರ್ಧೆಗಾಗಿ ( ಚಿತ್ರ ಕವನ)

ಸ್ಪರ್ಧೆಗಾಗಿ ಕ್ಷಮಿಸಿ ತಡವಾಗಿದೆ.
ಸೀಸದ ಕಡ್ಡಿಯಂತೆ
~~~~~~~~~~~
ಅಳಿಯದ‌ ಬರಹ ಬರೆಯಬೇಕು
ಸಕಲರ ಮನವನು ಸೆಳೆಯಬೇಕು
ಎಳೆಯ ಹಿರಿಯರಲಿ ಬಾಗಬೇಕು
ಹಿರಿಯ ಕಿರಿಯರ ಮನ ಗೆಲಬೇಕು

ನಮದೇ ಲೇಖನ ನಾವೇ ತಿದ್ದಬೇಕು
ಬಿದ್ದರೂ ಎದ್ದು ನಿಲ್ಲುವಂತಿರಬೇಕು
ಲೇಖನಿ ಹರಿತ ಮಾಡಿ ಫಲವೇನು
ಬುದ್ಧಿಮತಿಯ ಚೂಪು ಮಾಡಬೇಕು

ಯಾರನೂ ಊರುಗೋಲಾಗಿಸದೆ
ಯಾರಿಗೂ ಉರುಳು ಬೀಳಿಸದಂತೆ
ಸಮಾಜದ ತಮವ ಕಳೆಯುವಂತೆ
ಸಕಲರ ಬಾಳಲಿ ಬೆಳಗು ಮೆರೆವಂತೆ

ನಾವಾಗಬೇಕು ಸೀಸದ ಕಡ್ಡಿಯಂತೆ
ಅನ್ಯರ ಬರಹಕೆ ಮಸಿ ತಾನಾದಂತೆ
ಬರೆದ ಕೈಗೆ ಕಪ್ಪು ತಪ್ಪು ಮೆತ್ತದಂತೆ
ತಪ್ಪಾದರೂ ಇತರರು ಅರಿಯದಂತೆ

ವೈಲೇಶ ಪಿ ಯೆಸ್ ಕೊಡಗು
೬/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ