ಹಚ್ಚದಿರಿ‌ ಕಿಡಿ

ಹಚ್ಚದಿರಿ ಕಿಡಿ
~~~~~~~
ಒಂದಷ್ಟು ದುಡುಕು ಮತ್ತಷ್ಟು ಕಾತರ
ಸಾಗರದಲೆಗಳ ಮೇಲಣ ಕಿರಣದಿ
ಬೇಳೆ ಬೇಯಿಸಿಕೊಂಡವರ ಮೊಗದಿ
ಲಘು ಬಗೆಯ ಹುಸಿನಗೆ. ಎಡಬದಿ
ಬಲಬದಿ ಅರಿಯದೆ ಎಡವದಿರಿ.‌

ಸತ್ತು ಮಲಗಿದ ಬಳಿಕ ಹೆಣ ಹೊತ್ತು
ಹೋಗುವವರಿರಲಿ. ನಿತ್ಯದ ಬದುಕಿಗೆ
ಮತ್ತಾವುದೂ ಬೇಕಿಲ್ಲವೆಂಬ ತಿಳಿವು
ನಮಗೆಲ್ಲಾ ಬರಲಿ ಸೋತು ಸುಮ್ಮಗೆ
ಕೂತರೆ ಜತೆಗೆ ಯಾರ್ಯರೂ ಬರರೇ

ತನುವ ಕುಲುಮೆಗೆ ಮುಗಿಯದೊಲುಮೆಗೆ
ಅರಿಯದಾಯಿತೆ ವಾರಸುದಾರಗೆ ಮಿಗೆ
ಅಂಗ ಸಂಗಕೆ ಮಂಗ ಮನದಂಗಳಕೆ ಚಂಗನೆ
ಜಿಗಿದಿಹ ಮಿಗವಿಂದು ಬೇಟೆಗಾರನ ಬಲೆಗೆ
ಬೀಳುವ ದಿನಗಳು ಮಿಗೆಯಿಲ್ಲ ಬಲ್ಲಿರೈ

ಮನದಿ ತರವಲ್ಲ ಅರಿ.ತಂಪು ಮೆರೆಯದ
ಗುಂಪಿನೊಳು ಗುರುವಿಗಿಲ್ಲ ಬೆಲೆ ನೆಲೆ
ಗುರುವಿಗೆ ಬೆಲೆ ಇಲ್ಲದೆಡೆ ನಿಲದಣ್ಣ ನಮ್ಮ
ಸೆಲೆ ಅರಿತರಿತು ದ್ವೇಷದ ಕಿಡಿಯ ಹೊತ್ತಿಸದಿರಿ
ಹೊತ್ತಿದ ಕಿಡಿ ಕೊನೆಗೆ ಎಮ್ಮನು ಹೊತ್ತೊಯ್ಯುದು

ವೈಲೇಶ ಪಿ ಯೆಸ್ ಕೊಡಗು
೬/೪/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ