ಆತ್ಮನು ಪರಮಾತ್ಮನು

ಆತ್ಮನು ಪರಮಾತ್ಮನು
~~~~~~~~~~~~
ಎಮ್ಮವನಿವನು ನಮ್ಮವನು
ಎಮ್ಮಯ ಕರಪಿಡಿದು ನಡೆಸುವನು
ನಮಗೆ ಹಾದಿಯನೆಂದೂ ತಪ್ಪಿಸನು
ಮರೆತು ಮೀರಿ ತಪ್ಪಿದರೆ ಮಾರಿ ಇವನು

ನಮ್ಮ ದುಡಿಮೆಯ ಮೆಚ್ಚಿಹನು
ಹೊತ್ತಿಗೆ ತುತ್ತು ಕೂಳನು ನೀಡುವನು
ಕಪಟ ಮೋಸ ಮೊಸಳೆ ಕಣ್ಣೀರ ಮೆಚ್ಚನು
ತಪರಾಕಿಯ ಜೊತೆಗೆ ಕಷ್ಟಗಳನೇ ಇಟ್ಟಿಹನು

ಜನರ ಮನವ ಗೆಲುತಿರಲು
ಗೆಲುವನೇ ಅಟ್ಟಟ್ಟಿ ಇಟ್ಟವನು
ಸೋಮಾರಿಯಾದೊಡೆ ಸೋಲುಗಳ
ಸಾಲು ಸಾಲುಗಳನೇ ಸಾಲವಾಗಿ ನೀಡುವನು

ಆತ್ಮನಿವನು ಪರಮಾತ್ಮನಿವನು
ಪರರ ಚಿಂತೆಗೆ ಚಿತೆಯೂರ ಸೇರಿದನು
ನಮ್ಮೊಳಗೆ ಅವನಾಗಿ ಅವನೊಳಗೆ ನಮ್ಮ
ಸೆಳೆಯುವವನಾಗಿ‌ ನಿಂದಿಹನು ನಮ್ಮಾತ್ಮದ
ಪರಮಾತ್ಮ ಕೈಲಾಸದೊಡೆಯ ಈಶ್ವರನಿವನು

ವೈಲೇಶ ಪಿ ಯೆಸ್ ಕೊಡಗು
೧೩/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ