ಪರ್ದ್ : ೧
ಪರ್ದ್ : ೧
ನದಿ ಸೊಕ್ಕಿ ಉಕ್ಕಿ ಹರಿದರೇನಂತೆ ಮಳೆಗಾಲದಿ
ಋತು ಬದಲಾದಾಗ ಬಿಕ್ಕಿ ಸರಿಯದೇ ಆದೀತೆ.
ಮೂಡಣ ರವಿ ಮಂಜಿನ ಮುಸುಕ ಸರಿಸಿದರೇನು
ಮುಸ್ಸಂಜೆಗೆ ಮತ್ತೆ ಮಂಜು ಮುಸುಕಲಾರದೇನು.
ಹೆತ್ತ ನೋವ ಮರೆತ ಜೀವಕೆ ಮತ್ತೆ ನೋವದೇಕೆ
ಪ್ರೀತಿ ಹೆಸರಲಿ ರೀತಿಯ ಮರೆತು ಬಾಳುವುದೇಕೆ.
ಬಂಧುಗಳ ಹೆಸರಲಿ ಬಂಧನ ಬೇಕೆ ಬಾಂಧವ್ಯ
ಬೆಸೆದು ಬದುಕು ನಂದನವನವಾದರೆ ಸಾಕಲ್ಲವೇ.
ಕಲ್ಲಿನಲಿ ಕೆತ್ತಿದ ಗೊಮ್ಮಟ, ಬಸವ, ಬುದ್ಧರು
ಶಾಂತಿಯ ಸಾರುತಿಹರು ಮಾನವನಿಗೇನಾಗಿದೆ.
ವೈಲೇಶ ಪಿ ಯೆಸ್ ಕೊಡಗು
೫/೨/೨೦೧೮
Comments
Post a Comment