ಸಕಲವೂ ನೀನೇ ದೇವಾ
ಸಕಲವೂ ನೀನೇ ದೇವಾ
~~~~~~~~~~~~~
ಸಕಲವನು ಕೊಟ್ಟವನು ಇವನೇ
ಸರ್ವವನು ಇಟ್ಟವನು ಶಿವನೇ
ಗರ್ವವನು ಬಿಟ್ಟವನು ದೇವನೇ
ಕರುಣಾಳು ಈಶನೇ ಜಗದೀಶನೇ
ಅಮೃತದಾಸೆಗೆ ಸುರಾಸುರರು
ಕಡಲನು ಜತೆಗೇ ಮಂಥಿಸಿದರು
ಮೊದಲಾಗಮನ ವಿಷವಾದರು
ಹಾಲಾಹಲವ ಶಿವನೇ ಕುಡಿದರು
ಮೂಜಗವು ತನದೆಂದು ಬಲ್ಲರು
ಅದನೆಂದು ತಾ ತೋರಲೊಲ್ಲರು
ತನಗೆಂದು ತಾನೇನು ಇಡದಾದರು
ಪಾರ್ವತಿಯ ತೊರೆದು ಇರಲಾರರು
ಅಖಿಲ ರಾತ್ರಿಗಳೆಲ್ಲಾ ಜೀವಿಗಿರಲಿ
ಅವಗೊಂದು ರಾತ್ರಿ ಮುಡಿಪಿರಲಿ
ಅನುದಿನದ ಚಿಂತೆ ತಾ ಬರದಿರಲಿ
ಅವನಾಮವೊಂದೇ ಮೊಳಗಿರಲಿ
ಇರುವುದೆಲ್ಲವ ನಮಗೆ ಕೊಟ್ಟು
ಚರ್ಮಾಂಬರವ ತಾನು ತೊಟ್ಟು
ಮಸಣ ಸೇರಿದ ಬಿಡದೇ ಗುಟ್ಟು
ಪಡೆದುದೆಲ್ಲವನು ನಾವು ಬಿಟ್ಟು
ನಡೆವೆವು ಕಾಲನ ಕರೆಗೆ ಓಗೊಟ್ಟು
ವೈಲೇಶ ಪಿ ಯೆಸ್ ಕೊಡಗು
೧೩/೨/೨೦೧೮
Comments
Post a Comment