ತರ್' ಹೀ ಗಝ಼ಲ್ : ೧೬
ತರ್'ಹೀ ಗಝ಼ಲ್ : ೧೬
ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು
ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು
ಕವಿ ಗೋವಿಂದನ ಹೆಗಡೆಯವರ ಗಝ಼ಲ್
ಬಿತ್ತವದು ಮೊಳಕೆಯಾಗಲು ಅದೆಷ್ಟು ಕಾಯಬೇಕು
ಮಣ್ಣಹೆಂಟೆ ಕಸವರವಾಗಲು ಅದೆಷ್ಟು ಕಾಯಬೇಕು
ಒಡಲ ಶಿಶು ಜಗಕಿಳಿಯಲು ನವಮಾಸದಷ್ಟು ಕಾಯಬೇಕು
ಕೂಸು ಸೊಂಪಾಗಿ ಬೆಳೆಸಲು ಮನಸಿನಷ್ಟು "ಕಾಯ" ಬೇಕು
ಜೀವಿತದ ರಸಭರಿತ ಕ್ಷಣ ಸವಿಯಲು ಸಿಹಿ ಮನವಿರಬೇಕು
ಸಂಗಾತಿ ಸಂಪ್ರೀತಿಯ ಕದಿಯಲು ಬೆಟ್ಟದಷ್ಟು ಕಾಯಬೇಕು
ಬದುಕ ಸಂತೆಲಿ ನಾನೆಂದು ಮೆರೆವರ ಕಾಣದಂತಿರಬೇಕು
ಮೆರೆದವ ಅಳಿವುದ ಮನಗಾಣಲು ಇನ್ನೆಷ್ಟು ಕಾಯಬೇಕು
ಮಗು ಹೆಜ್ಜೆಯನಿಟ್ಟು ನಡೆಯಲು ಮನ ಮುದಗೊಂಡಿದೆ
ಮುದವು ಮುದುಡದೇ ಕಾಪಿಡಲು ಮತ್ತೆಷ್ಟು ಕಾಯಬೇಕು
"ಸಿಡಿಲು" ನ ಮನದೊಳಗಡಗಿವೆ ನನಸಾಗದ ಕನಸುಗಳು
ಕನಸುಗಳ ನನಸಾಗಿಸೆ ಜೀವವಿದು ಬಹಳಷ್ಟು ಕಾಯಬೇಕು
ವೈಲೇಶ ಪಿ ಯೆಸ್ ಕೊಡಗು
೧೯/೨/೨೦೧೮
Comments
Post a Comment