ಆಲೋಚನೆ ಇರಲಿ

ಆಲೋಚನೆ ಇರಲಿ
~~~~~~~~~~~
ಸಾಲವಯ್ಯ ಇದು ಸಾಲವಯ್ಯ
ಶೂಲವಯ್ಯ ಹೊನ್ನ ಶೂಲವಯ್ಯ
ಮನದ ಮತ್ತಿಗೆ ಮನದೊಳು ಮುತ್ತಿಗೆ
ಮನೆ ಸಾಲವೆಂಬ ಬಹು ದೊಡ್ಡ ಸುತ್ದಿಗೆ
ಕುತ್ತಿಗೆ ಹಿಸುಕೀತು ಅರಿಯದೆಲೆ ಮೆತ್ತಗೆ 

ಅಪ್ಪನು ಮಾಡಿಲ್ಲ ಅಪರಿಮಿತ ಆಸ್ತಿ
ಪಗಾರವಲ್ಲದೇ ಬೇರೆ ಆದಾಯ ನಾಸ್ತಿ
ಕೈಗೆ ದೊರಕಿದಕೂ ಖರ್ಚು ವೆಚ್ಚ ಜಾಸ್ತಿ
ಹೊಂದಿಕೊಂಡು ಬಾಳಬೇಕಾದ ಸ್ಥಿತಿ ಗತಿ
ಹೀಗಿದ್ದರೂ ಮನೆ ಮಾಡಲೇಬೇಕೆಂಬ ಮತಿ

ಮಿತಿಯಿರಲಿ ಆಸೆ ಅತಿಯಾಗದಿರಲಿ
ಯೋಜನೆ ಯೋಚನೆ ಆಲೋಚನೆ ಇರಲಿ
ಬಂದವರು ಎಂದರೆಂದು ಮಿತಿ ಮೀರದಿರಲಿ
ಅದು ಬೇಕು ಇದೂ ಬೇಕು  ಗಂಟಿನ ಅರಿವಿರಲಿ
ನೆಂಟರು ಬಂಟರೂ ಬರಲಾರರು ಸಾಲ ಹೆಚ್ಚಾದಲ್ಲಿ

ಮನೆ ತುಂಬಾ ಓಡಾಡುವ ಬಯಕೆ
ಮುಪ್ಪಿನಲಿ ಮಂಡಿಗೆ ಮೇಯುವುದೇಕೆ
ಕಟ್ಟಿಸದೆ ಮುಂದೂಡುವುದು ಏಕೆ ಎಂದಾಕೆ
ಮುಗಿಯತಲ್ಲ ನನ್ನ ಬಹುದಿನಗಳ ಹೆಬ್ಬಯಕೆ
ಸಾಲ ಇರಲಿ ದೇಶದೆಲ್ಲರಿಗೂ ಸಾಲ ಇದೆಯೆಂದಳಾಕೆ

*ವೈಲೇಶ ಪಿ ಯೆಸ್ ಕೊಡಗು*
೭/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ