ತಂಪಾಗಲಿ ವಸುಂಧರೆ

ತಂಪಾಗಲಿ ವಸುಂಧರೆ
~~~~~~~~~~~~
ಮೂಡಣ ಮನೆಯ ರವಿಯಾಗಮನ
ಜಗದೀಶ ಹಾಸಿಗೆ ಬಿಟ್ಟು ಎದ್ದಿರುವನಾ?
ನೋಡೋಣವೆಂದರೆ ಮಂಕಾಗಿಹೆ ನಾ
ನಿತ್ಯದಂತೆ ರಾತ್ರಿ ಪಾಳಿ ಕರ್ತವ್ಯ ಕಾರಣ

ಭಜನೆಯ ಗೌಜಿಗೆ ಈಶ ಬಳಲಿದನಾ
ಸರ್ವೇಶ ನೆಮ್ಮದಿಯಿಂದ ನಿದ್ರಿಸಿದನಾ 
ಜೂಜಾಡುವವರ ನಡುವೆ ಸಿಲುಕಿದನಾ
ಟಿವಿ ವಾಹಿನಿ ಚಲನಚಿತ್ರ ನೋಡಿದನಾ

ಕುಡಿದು ಕುಣಿದು ಕುಪ್ಪಳಿಸಿದವರ ಐಸಿರಿಗೆ 
ತಲೆಕೆಟ್ಟು ಪೋನಾಯಿಸಿದ ಸಾರ್ವಜನಿಕರಿಗೆ
ಸಹಾಯಕ್ಕೆಂದು ಬಂದ ಪೋಲೀಸ್ ಸೈರನಿಗೆ
ತತ್ತರಿಸಿ ದಡಬಡಿಸಿ ಎದ್ದು ಓಡಿದನಾ ಮತ್ಹೇಗೆ

ಶಿವನು ಶವದಂತೆ ಮಲಗಿರುವನೆಂದು ನಂಬಿ
ಪ್ರೇಮಿಗಳ ದಿನದ ಕನಸು ಕಂಡವರ ದೊಂಬಿ
ಅಕೃತ್ಯವಂ ಗೈದವರ ಲೆಕ್ಕಾಚಾರ ಈದ ನಂದಿ
ಅದನ್ನೋದಿ ಎಚ್ಚರ ಇರುವಾಗಲೇ ನರ ಮಂದಿ
ನಡೆಸಿದನಾಚಾರ ಕಾಣಲಾರೆ ಎಂದು ಎದೆಗುಂದಿ

ಮಲಗಿದರೆ ಈ ಪರಿಯೇ ಎಂದನಾ ಜಗದ ದೊರೆ
ಅಯ್ಯೋ ತಾಳಲಾರೆ ಉಮೆ ಏನೀ ಜನರ ಮೊರೆ
ಶಿಷ್ಟರಕ್ಷಣೆಯ ದುಷ್ಟಶಿಕ್ಷಣವ ಮರೆತು ಹೋದರೆ
ಅಗದು ತೃತೀಯಾಕ್ಷಿ ತೆರೆದು ಉರಿಸಿಬಿಡುವೆ ಧರೆ
ಹಾಗಾದರೂ ತಂಪಾಗಲಿ ಎನ್ನ ತಾಯಿ ವಸುಂದರೆ

ವೈಲೇಶ ಪಿ ಯೆಸ್ ಕೊಡಗು
೧೩/೨/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ