ನಿತ್ಯ ನೈವೇದ್ಯ

ನಿತ್ಯ ನೈವೇದ್ಯ
~~~~~~~
ಹಿಂದೆ ಇಲ್ಲಿಯೇ ಇತ್ತೊಂದು ಖಗ ಮೃಗಗಳ
ಪಂಚತಾರಾ ಅತಿಥಿ ಗೃಹ. ಬಂದು ಸೇರಿದರೆ
ಕಾಸಿಲ್ಲ ಕರಿಮಣಿಯಿಲ್ಲ ಭರ್ಜರಿ ಬೋಜನ.
ನಿತ್ಯ ನೈವೇದ್ಯ ಹತ್ತೂರಿನ ಹಕ್ಕಿಗಳ ಬಳಗಕ್ಕೆ
ಹಬ್ಬದೂಟದ ಜೊತೆಗೆ ಬೇಟೆಗಾರರ ಕಾಟ

ಏರಲರಿಯುವ ಎಲ್ಲಾ ಜೀವ ಸಂಕುಲಗಳು
ಏರಲರಿಯದ ಸಕಲ ಅತಿಥಿಗಳಿಗೆ ಇವುಗಳು
ಅತಿಥೇಯರು ಕೆಲವನ್ನು ಕಚ್ಚಿ ಕೊಚ್ಚಿ ದಳದಳ
ಕೆಳಗುರುಳಿಸಿದರೆ ಮೃಷ್ಟಾನ್ನಕೆ ಪೈಪೋಟಿಗಳು
ಮೇಲಿನವರದು ಈರ್ಷ್ಯೆ ಇಲ್ಲದ ಯೋಜನೆಗಳು

ಏರಲರಿಯದವರು ಕುಲುಕಿಸಿ ಬಾಗಿಸಿ ತಿಂದರೆ
ಕುಬ್ಜರು ಕೆಳಗೆ ಬಿದ್ದರೂ ನಮಗಿಲ್ಲ ತೊಂದರೆ
ಎಂದು ಗಬಗಬನೆ ಬಾಚಿ ದೋಚಿ ಮುಕ್ಕಿದರೆ
ಹಲ ಕೆಲವು ಪ್ರಾಣಿ ಪಕ್ಷಿಗೆ ಅಭಯವಿಲ್ಲದಿರೆ
ಆಹಾರದ ಹಾದಿ ಆಹಾರವಾಗುವ ಭಯವಿರೆ

ಅಡವಿಯಲಿ ಅದಾವ ಅರಿವಿರದೆ  ಪರಿಸರ
ಪಾಪ ಪುಣ್ಯಗಳ ಪ್ರಜ್ಞೆಯ ಗಮನಿಸಿದೇ ಸುರ
ಅಸುರರ ಬೇಧವಿಲ್ಲದೆ ಸಕಲ ಜೀವಿಗೆ ನಿರಂತರ
ಆಹಾರವನ್ನಿತ್ತ ಹಾಲು ಸೂಸುವ ಮರ ಅಮರ
ಆಲದ ಮರ ಅದನ್ನುಳಿಸೆ ಸಾರಬೇಕಿದೆ ಸಮರ

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೧/೧/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ