ವಿಚಿತ್ರ ಚಿತ್ತಾರ

ವಿಚಿತ್ರ ಚಿತ್ತಾರ
~~~~~~~~
ಮನುಜರೊಳಗೇ ವಿಚಿತ್ರ ಚಿತ್ತಾರ
ಒಂದೆಡೆ ಹಸಿರು ಮನಸಾರೆ ನೀರು
ಬೇರೆಡೆ ಮರಳು ಕಾಣರು ಸೂರು
ಮನದ ಭಾವನೆಗಳ ತಾಪ ಜೋರು

ಅರೆ ಘಳಿಗೆ ಕೋಪ ತಾಪ ಅನುಮಾನ
ತತ್‌ಕ್ಷಣ ಕರಗುವುದು ಮಾತೆಯ ಮನ
ಉಕ್ಕಿ ಸೊಕ್ಕಿ ಬಿಕ್ಕಳಿಸಿ ಬೀಳುವ ಮಾನ
ಮಧ ಹೆಚ್ಚಿ ಕಾದಿಹುದು ಬೇರೆ ಸಮ್ಮಾನ

ಕಡಲೊಳು ಕಡೆದುದಿಸಿದ ಅಮೃತದಂದ
ಮನವ ಮುದಗೊಳಿಸೆ ಜಗವೇ ಆನಂದ
ಮುತ್ತು ರತ್ನಗಳಿಂದ ಶಾಂತಿ ಕಾಣದೆಂದ
ಮೃದು ಮಧುರ ಬುದ್ದಿವಂತಿಕೆ ಬೇಕೆಂದ

ಮರವದು‌ ಅಳಿದರೆ ಮತ್ತೆ ಮಳೆ ಬಾರದು
ಮನವದು ಕೊಳೆತರೆ ಅರ್ಥ ಕಳೆ ಕಾಣದು
ಮನುಜನ ಹೊರತು ಯಾರು ಗಳಿಸಿ ಇಡರು
ಮಣ್ಣಿನಲಿ ಬೆರೆತ ಮೇಲೆ ಮತ್ತೇನೂ ಇರದು 

ಎತ್ತ ಕಡೆಗೋ ಮನ ಮತ್ತದೇ ಸುಮ್ಮಾನ
ಹರಿಸ ಬೇಕಿದೆ ಬೇಲಿ ವಿಂಗಡಿಸಿ ಖೋಲಿ
ಒತ್ತರಿಸಿ ಮನದೊಳಿಹ ಮುಳ್ಳುದು ಜಾಲಿ
ಕತ್ತರಿಸಿ ಎಸೆದರೆ ಮನದೊಳು ಖುಷಿ ಜಾಲಿ

ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೧೨/೧/೨೦೧೮

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ