ಭಾನು -ಬುವಿ
ಭಾನು - ಬುವಿ
~~~~~~~~
ಹರೆಯದ ಕಾಂತಿಯು ಉಕ್ಕಿ ಹರಿದಂತೆ
ಬಿಸಿ ಉಸಿರಿಗೆ ಹಸಿ ಹಸಿರು ಬಸಿರಾದಂತೆ
ನಿತ್ಯ ಕಾಯಕದಿ ಹೆಸರು ಹೊರ ಹೊಮ್ಮಿದಂತೆ
ಬರಡಾಗದು ಬುವಿಯು ನಾವೆಂದುಕೊಂಡಂತೆ
ಅವನೆಂದರೆ ಭೋರ್ಗರೆಯುವ ಜೋಗ
ತಾಳಲಾರೆನು ಅವನ ಸುಮಧುರ ವೇಗ
ನಾನಾದರೋ ಶರಧಿ ಅಲೆಯಂತೆ ರಾಗ
ನಿಧಾನಿಸದೆ ಬಂದು ತಲುಪುವನು ಬೇಗ
ಧರಣಿಯ ಬಯಕೆಯು ಮುಗಿಯದಂತೆ
ನಿತ್ಯ ಉತ್ತು ಬಿತ್ತಿದರಷ್ಟೇ ಬೆಳೆವುದಂತೆ
ಅವಳೊಲವು ಮುಂಜಾನೆಯ ಮಂಜಂತೆ
ರವಿಕಿರಣದ ಭೀತಿಗೆ ಅವಳೊಳು ಇಳಿವಂತೆ
ನಡೆದಿರೆ ಪ್ರೀತಿ ಪ್ರೇಮ ಪ್ರಣಯ ಸರಾಗ
ಹೊರಳಿ ಮರಳಿ ಕರುಳ ಬಳ್ಳಿಯ ರಾಗ
ಅರಿಯದಲೆ ಮಿಡಿಯುತಿರೆ ಮೋಹಕ ಗಾನ
ಬಾಳ ಬಾನಿಗೆ ಬಣ್ಣ ಬಳಿದು ಮಧುರ ತನನ
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೪/೧/೨೦೧೮
Comments
Post a Comment