ಕುವೆಂಪು ಜನ್ಮದಿನದ ಕವನ

ರಾಷ್ಟ್ರಕವಿ  ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಇವರ ನೆನಪಿಗೊಂದು ಕವನ ಶ್ರೀ ಕುವೆಂಪುರವರಿಗೆ ನನ್ನ ನುಡಿ ನಮನ

ನುಡಿಗನ್ನಡಾ ಸಿಹಿಗನ್ನಡಾ ಹೊಳೆ ಹೊಳೆವ ಸಿರಿ ಗಂಧದಾ ಸವಿಗನ್ನಡ
ತನುಮನಕೆ ಹುರುಪನೀವ ಹರಷದಾ ಹೊಳಹುಗಳ ತರುವ ನುಡಿಗನ್ನಡಾ.                                   !!ಪ!!

ವಿಪುಲ ನಕ್ಷತ್ರಮಯ ಗಗನದಿ ಧ್ರುವ ತಾರೆಯತರದೀ ಮೆರೆದಿಹುದೀ ಕನ್ನಡ
ನದೀತಟದ ಜಲದ ಜೋಗುಳದ ರಸಸಿರಿಯ ತರದೀ ಪಾಡಿಹುದೀ ಕನ್ನಡ
ಸೋನೆ ತುಂತುರು ಮಳೆಯೋಳ್ ಜಿಟಜಿಟಿಪ ಜಿನುಗು ನೀರಿನೋಳುದಿಪ ಕನ್ನಡ                                 !!1!!

ಕರ್ ಮುಗಿಲ್ ನಡುವೆ ಹೊಳೆವ ಬಾಲಶಶಿಯ ತೆರದಿ ಮಿನು ಮಿನುಗಿಹುದೀ ಕನ್ನಡ
ನಿಚ್ಚ ಪಚ್ಚೆಯ ಪಸುರ್ಬನದಿಂದೆಸೆವ ತೋಳ್ತೆಕ್ಕೆಯೋಳ್ ನಲಿವುದೀ ಕನ್ನಡ
ಮೂಡಣದಂಬರದಿ ಕಣ್ದೆರೆದುಷೆಯ ತೇರದಿ ಕರುನಾಡ ಜನಕೀ ಕನ್ನಡ.                                           !!2!!

ಗಾಳಿಗೊಲಿಯವ ಬಳ್ಳಿ ಜೋಲ್ವಂತೆವೋಲ್  ಜೋಲ್ವುದೈ ಕೇಳ್ ಕನ್ನಡ
ಮೇಘವನ್ಕಂಡು ನವಿಲುಗಳ್ ನಲಿವಂತತವೋಲ್     ಮನ ನಲಿವುದೈ ಕೇಳ್ ಕನ್ನಡ
ಕುಸುಮಸಂಕುಲದ ಪರಿಮಳದಂತಿಕ್ಕು ಹಕ್ಕಿಪಕ್ಕಿಯ ಧನಿಯಂತೈ ಕೇಳ್ ಕನ್ನಡ                       !!3!!

ವೈಲೇಶ ಪಿ ಯೆಸ್
ವಿರಾಜಪೇಟೆ
ಕೊಡಗು
31/12/2016
2016ರ ಕೊನೆಯ ಕವನ

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ