ನಮ್ಮೊಳಗು
ನಮ್ಮೊಳಗು
~~~~~~
ನಮ್ಮೊಳಗ ನಾವು ಅರಿಯಬೇಕಿದೆ
ಮೊದಲಿಗೆ ನಾನು ಅಳಿಯಬೇಕಿದೆ
ಸಾಲದು ನಾನು ಅಳಿದರಷ್ಟೇ ಸಾಲದು
ನನ್ನವರು ನನ್ನದು ನನ್ನಿಂದ ನನಗಾಗಿ ಎಂಬುದು
ಅಳಿಯಬೇಕಿದೆ ನಮಗೆ ಅರಿವು ಬೇಕಿದೆ.
ನಮ್ಮದೇ ಪೀಳಿಗೆಯ ಏಳಿಗೆಯ ಘಳಿಗೆಗಳ
ಅಳೆಯಬೇಕಿದೆ ಹಿರಿಯರ ಗೌರವ ಕಾಯುವುದೇ
ಇಲ್ಲ ಕಳೆಯುವುದೇ ಎಂದೇ ತಿಳಿಯಬೇಕಿದೆ.
ನಮ್ಮವರ ನಾವಲ್ಲದೇ ತಿದ್ದಲು ತೀಡಲು ಸಾಧ್ಯವೇ
ವಿನಃ ಅನ್ಯರಿಂದ ಸಾಧ್ಯವೇ ಸಾಧುವೇ. ನಾವು ಬಿಟ್ಟು
ಕೊಟ್ಟೀವೇ ಅಥವಾ ಬಿಟ್ಟು ಬಿಟ್ಟೀವೇ ಕೇಳಿ.
ನನದೆಂಬ ಮಮಕಾರವ ಬಿಡಿ ಜಗದ ಜನರ
ನಡುವೆಯೇ ಬದುಕಬೇಕೆಂಬ ಅರಿವಿರಲಿ
ನಮ್ಮದೇ ತುಂಡುಗಳ ಹುಚ್ಚಾಟ ಹೆಚ್ಚಾಟ ಹೆಚ್ಚಿ
ಲುಚ್ಚರಾಗುವ ಮುನ್ನ ಶಿವನು ಮೆಚ್ಚುವಂತಿರಲಿ
ನಮ್ಮಯ ಬುದ್ಧಿವಾದ. ಗಂಡು ಹೆಣ್ಣೆಂಬ ಬೇಧವಿರದೆ.
ಬುರುಡೆಯೊಳಗೆ ಬುದ್ಧಿಯ ತುಂಬುವ ಚಿಂತನೆ
ಮನರಂಜನೆ ಕಾಣದಾಗಿದೆ. ಬುರುಡೆಯ ಬಿಟ್ಟು
ಮೋಜು ಮಸ್ತಿ ಗೈದು ಮನಕೆ ಕೆಡುಕುಗಳ ಕರಡು
ತುಂಬುವ ಹಲಕೆಲವು ಮಾಧ್ಯಮಗಳು ಮಕ್ಕಳ
ಮನಸೂರೆಗೊಳ್ಳುತಿವೆ. ಮೈ ಮರೆತು ಕೆಡುಕುಗಳ
ಬಿತ್ತುತ್ತಿವೆ. ಜಗದ ಅರಿವು ಹೊತ್ತಿ ಉರಿಯುತ್ತಿವೆ.
ನಮ್ಮೊಳಗೆ ನಾವು ಬದಲಾಗದೇ ಅವರಿವರ
ನಡೆನುಡಿಗಳ ಬರಿದೇ ಬಡಬಡಿಸಿ ಫಲವೇನಿದೆ.
ಅವರಿವರ ಮಗುವಂತೆ ಅರಿವಿನ ಕೊರತೆಯಂತೆ
ಎನದೇ ನಮ್ಮ ಆರತಿ ಕೀರುತಿಯ ಕುರಿತು ಕಿಂಚಿತ್ತೂ
ಎಚ್ಚೆತ್ತು ನಡೆದರೆ ಜಗವ ತಿದ್ದುವ ಭಾಗ್ಯ ಅವರಿವರಿಗೆ
ಅರಿಯದ ಅರಿವು ನೀಡುವ ಭ್ರಮೆಯು ನಮಗಿರದು
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೨/೧/೨೦೧೮
Comments
Post a Comment