ಕ್ಯಾಲೆಂಡರ್ ೨೦೧೮
ಕ್ಯಾಲೆಂಡರ್ ಶುಭಾಶಯಗಳು
~~~~~~~~~~~~~~~~
ಅಂದಿಗಂದಿಗೆ ಒಂದು ಗುರುತಿರಬೇಕು
ನಗುನಗುತಾ ಎಲ್ಲರೂ ಗುರುತಿಸಬೇಕು
ಅದಕ್ಕೆಂದೇ ಮಾಸದ ಹೆಸರು ಹರುಷದ
ಹಬ್ಬಗಳನ್ನು ವಾರ ಒಪ್ಪತ್ತುಗಳ ಗುರುತು
ಎಲ್ಲರೂ ಒಪ್ಪುವ ಕ್ಯಾಲೆಂಡರ್ ಅರಿತು
ಜಗದಗಲ ಜನಗಳಿಗೂ ಒಂದೇ ದಿನಾಂಕ
ಸರತಿಯ ಸಾಲಿನಲಿ ವರುಷದ ಗಣಾಂಕ
ಮಾಸಗಳು ಹನ್ನೆರಡು ವಾರಗಳಲ್ಲಿ ಏಳು
ದಿನಗಳ ಗುರುತಿಗೆ ಮನುಜರಿಗೆ ಸಹಾಯಕ
ಹುಟ್ಟಿದ ದಿನಕ್ಕೆಂದೇ ಹಚ್ಚುವರು ಹಣೆಪಟ್ಟಿ
ಜನುಮ ದಿನಾಂಕವಿಲ್ಲದ ಶಾಲಾ ಅಂಕಪಟ್ಟಿ
ಸಿಗದಲ್ಲ ಮತ್ತಾವುದೆ ಚಾಲ್ತಿಯ ಜೇಷ್ಠ ಪಟ್ಟಿ
ಅಷ್ಟೇಕೆ ಸ್ವಾಮಿ ಸಿಗದು ಮೊಬೈಲ್ ಸಿಮ್ಪಟ್ಟಿ
ಬೇಡ ಎನ್ನುವವರು ಕ್ಯಾಲೆಂಡರ್ ಬಿಡರು
ನಮ್ಮತನ ನಮಗಿರಲಿ ಬೇರೆಲ್ಲ ವಿಚಾರದ
ಮನನ ಮಾಡಿಕೊಳ್ಳುವರೆ ಜಗದ ಜನರ
ಜೊತೆಗೆ ಒಮ್ಮತವಿರಲಿ ಭೇದ ಬದಿಗಿರಲಿ
ನಮ್ಮದೇ ೨೦೧೮ ವರ್ಷದ ಶುಭಾಶಯಗಳು
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೦೧/೦೧/೨೦೧೮
Comments
Post a Comment