ವಚನ ೬೨
ವಚನ :೬೨
~~~~~~
ಕತ್ತಾಳೆ ಗಿಡವಾದರೂ ಹಿತ್ತಾಳೆ ಕಿವಿಯಾಗಬಾರದು
ಹತ್ತು ಜನರಿಗೆ ಅನ್ನವಿಡದಿದ್ದರೂ ಹೆತ್ತವರ ಮರೆಯಬಾರದಯ್ಯ.
ಸ್ವಾರ್ಥದ ಕಾರಣಕೆ ಹೆರವರ ವಿರುದ್ಧ ಚಾಡಿ ಹೇಳುವವರ
ನುಡಿಯನ್ನಾಲಿಸದಿರಿ. ತನುವಿಗೆ ಬಲವನ್ನೀದ
ತಾಯಿ ತಂದೆಯವರ ಎಂದೆಂದಿಗೂ ಮರೆಯದಿರಿ
ಎಂಬರೈ ಹರಹರ ಶ್ರೀ ಸಿಡಿಲು ಬೊಮ್ಮಲಿಂಗೇಶ್ವರ.
ವಚನ : ೬೩
~~~~~~~
ಅತೀ ವಿನಯಂ ಧೂರ್ತ ಲಕ್ಷಣಂ ಎಂಬಂತೆ
ಕಿರಿಯರೆದುರು ನಾನೇ ಕಿರಿಯ ನಾನೇ ಕಿರಿಯ
ಎಂಬ ವಂಚಕನ ನಂಬದಿರಯ್ಯ. ವಿನಯದ
ಸೋಗಿನಲಿ ನಿಮ್ಮ ಬಂಧಿಸಿ ಸ್ವಾರ್ಥಕ್ಕಾಗಿ ನೀಚ ಕೆಲಸವ
ಮಾಡದಿರಲಾರ ಎಂಬರೈ ಹರಹರ
ಶ್ರೀ ಸಿಡಿಲು ಬೊಮ್ಮಲಿಂಗೇಶ್ವರ.
ವಚನ : ೬೪
~~~~~~~
ಬೇವು ಬಿತ್ತಿ ಮಾವು ಪಡೆಯಲಹುದೇ
ಜಗದೊಳು ಪಾಪ ಕಾರ್ಯಗಳು ನಮ್ಮ ಬೆನ್ನು
ಕಾಯಲು ತರವೇನಯ್ಯ . ಜಗದೊಳು ನಾವು ಗೈದ
ಲೋಕೋಹಿತ ಕಾರ್ಯಗಳು. ನಾವು ಕಾಪಿಟ್ಟ ಸತ್ಯ
ಧರ್ಮವದು ನಮ್ಮ ತಲೆ ಕಾಯ್ಯುದೆಂಬ
ಹರಹರ ಶ್ರೀ ಸಿಡಿಲು ಬೊಮ್ಮಲಿಂಗೇಶ್ವರ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೯/೧೨/೨೦೧೭
Comments
Post a Comment