ದಾದಿಯರು
ದಾದಿಯರು
~~~~~~~
ದಾದಿಗಳಲ್ಲವೋ ತಾಯಿಯರು
ಎಮ್ಮ ಸೇವೆಗೆಂದೇ ಪಣ ತೊಟ್ಟಿಹರು
ತಮ್ಮದೇ ಬೇಗುದಿಯ ಮರೆತಿಹರು
ಸಕಲರ ಪ್ರಾಣವ ಕಾಯುವವರು ||ಪ||
ಮನುಜರ ಕೊಳೆಯ ಕಳೆಯುವರು
ಹೊಲಸೆಂದು ಹೇಸಿಗೆ ತಾಳದವರು
ವಾಸನೆ ಸುವಾಸನೆ ಎನ್ನದವರು
ಮನತುಂಬಿ ಸೇವೆಯ ಮಾಡುವರು||೧||
ನೋವಿಗೆ ಮರುಗುವ ಮನದವರು
ದಿನ ದಿನವೂ ಸಾವುಗಳ ಕಂಡವರು
ಭಾವನೆಯ ಸೆಳೆತಕ್ಕೆ ಸಿಗದವರು
ಸೋದರಿ ಪ್ರೀತಿಯ ಮೆರೆದವರು ||೨||
ನಿಂದಿಸಿ ನುಡಿವವಗೆ ಕೊರತೆಯಿಲ್ಲ
ಅಪಹಾಸ್ಯಕೆ ಗುರಿಯಾಗಿಹರಲ್ಲಾ
ಮಾನ ಸನ್ಮಾನ ಇವರಿಗೆ ಬೇಕಿಲ್ಲ
ಸಾಮಾನ್ಯ ನುಡಿಗೆ ನಗು ನಗುವರಲ್ಲ ||೩||
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೭/೧೨/೨೦೧೭
Comments
Post a Comment