ವರ್ತಮಾನ
ವರ್ತಮಾನ
~~~~~~~
ಗಜರಾಜನ ಹಿಂಗಾಲಿಗೆ ಮೆದು ಲತೆಯಿಂದ
ಸುತ್ತಿ ಬಂಧಿಸಿದಂತೆ ನಮ್ಮೊಳ ಮನದಲಿ
ಅಡಗಿಹುದು ಭಾವನೆ. ನಿಂತಲ್ಲೇ ಸೋತು
ಸತ್ತಿರುವ ಮನದಾಳದ ಕಾಮನೆ ಅನಿಂದ್ಯಾ
ಕಾಯಕ ಮಾಡುತ್ತಿರುವ ನಾವು ಸುಮ್ಮನೆ.
ಇಗೋ ಇಂದಿನ್ನೂ ಮೊದಲ್ಗೊಂಡಿಲ್ಲ
ನಾಳಿನ ಚಿಂತೆಯಾವರಿಸಿ ಕಾಯಕ ಸಾಗಿಲ್ಲ.
ಜೀವನ ಯಾನ ಸಾಗಲೇ ಬೇಕಾಗಿದೆಯಲ್ಲ.
ಭೂತಕಾಲವ ಹಳಿಯುತ್ತಾ ಭವಿತವ್ಯವ
ಕಾಯುವ ಹಕೀಕತ್ತು ನಮಗೆ ಬರಬೇಕಿಲ್ಲ
ಗುರಿ ಇರಲಿ ಜೊತೆಗೆ ಗುರುವೂ ಇರಲಿ
ಸಕಲವ ಗಳಿಸಿಕೊಳ್ಳುವ ನಿರೀಕ್ಷೆಯಿರಲಿ
ಕಳೆದುಹೋದ ಕಹಿ ನೆನಪುಗಳ ಮರೆಯಿರಿ.
ಬರುವುದು ಭವಿಷ್ಯ ನಡೆಸುವುದು ಶುಭಸ್ಯ
ಎನದೆ ಇಂದಿನ ವರ್ತಮಾನವ ಮೆರೆಯಿರಿ.
ಗುರಿ ಸೇರುವೆನೇ ಎಂಬ ಚಿಂತೆ ಏಕೆ?
ದಾರಿ ಸುಗಮವಾಗಲಿ ದುಡಿಮೆಯಲಿ
ನಾಳಿನ ಗುರಿಯದು ಪಾದದಡಿಯಲಿ
ಪುಕ್ಕಲು ತಿಕ್ಕಲುತನದ ಬದುಕು ನರಕದಲಿ
ಧೈರ್ಯ ಸ್ಥೈರ್ಯವಿರೆ ಸುಬಾಳು ನಾಕದಲಿ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ ಘಟಕ
೭/೧೨/೨೦೧೭
Comments
Post a Comment