ಮಾಸದಿರಲಿ ನಗು

ಮಾಸದಿರಲೀ ನಗು
~~~~~~~~~~
ಮಾಸದಿರಲೀ ನಗು
ಓ ಮುದ್ದಿನ ಮಕ್ಕಳೆ
ಗತ ನೆನಹು ನಮ್ಮದು
ಆ ಘಳಿಗೆಗಳು ಕಾಣದು ಇನ್ನೆಂದೂ........

ಕಳೆದ್ಹೋದವು  ವಸಂತಗಳು
ಕಾಣಲಾರದೇ ಸಂತಸಗಳು
ಉಣಲಿದ್ದರೆ ಉಡಲಿಲ್ಲದೇ
ಒಡಲಲ್ಲಿ ಕಸುವಿಲ್ಲದೇ
ಕಳೆದುಹೋದವು ವಿಷಾದದಿಂದಲೇ ಬಾಲ್ಯವು........

ಅಪ್ಪನಿಲ್ಲದೇ ಅನ್ನವಿಲ್ಲದೇ
ಅಮ್ಮನಿದ್ದರೂ ಹಾಲಿಲ್ಲದೇ
ಆಸ್ತಿ ಪಾಲಿನ ಹಂಗಿಲ್ಲದೇ
ನೋಟು ಬೇಟೆಯ ಚಿಂತೆಯಿಲ್ಲದೇ
ಮನ ಬಿಚ್ಚಿ ನಗುವಿರೆಂದರೆ ಆಹಾ..........

ಲಿಂಗ ಬೇದವಿಲ್ಲದೆ
ಜಾತಿ ವಿಜಾತಿ ಹಂಬಲವಿಲ್ಲದೇ
ಹೊಟ್ಟೆಯೊಳಗಣ ಸಂಕಟ ನೂರಾರು
ಹೇಳಿದರೂ ನೀಗಿಸುವವರ್ಯಾರು
ಕೇಳುವುದಿಲ್ಲವಲ್ಲ ನಿಮ್ಮನ್ನು ಯಾರೂ
ನಮ್ಮ ಹಾಗೆ ನೀವು ಅಲ್ಲವೇ ಮನುಜರು........

ನಿಮಗೊಂದು ನೆಲೆಯುಂಟು
ನಿಮಗೊಂದು ಬೆಲೆಯುಂಟು
ವಿದ್ಯೆ ಕಲಿಯುವುದು ಅನಿವಾರ್ಯ
ಅದಲ್ಲದೇ ಉನ್ನತಿಗೆ ಬೇರೆ ಇಲ್ಲ ಪರ್ಯಾಯ
ಅದಕ್ಕಾಗಿ ತೋರಿಸಿ ತಮ್ಮ ಘನ ಗಾಂಭೀರ್ಯ........

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
  5/12/2016

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ