ಕಣ್ಮರೆಯಾದ ಹಳ್ಳಿ
ಕಣ್ಮರೆಯಾದ ಹಳ್ಳಿ
~~~~~~~~~~
ನ್ಯಾಯ ನೀತಿ ನಾಗಾಲೋಟದ ಸಮಯ
ಅಜ್ಜ ಬಿಜ್ಜರು ಬಿತ್ತಿ ಬೆಳೆಯುತ್ತಿದ್ದ ವಿಷಯ
ಇಳುವರಿ ಕೊರತೆ ಅಹಾರ ಒರತೆ ಸಂಶಯ
ಸಗಣಿ ಗೊಬ್ಬರವೇ ಬೆಳೆಗಳಿಗೆ ಸಹಾಯ
ಮೂರು ಹೊತ್ತು ಹೊಟ್ಟೆ ತುಂಬಿದ್ದು ಅತಿಶಯ
ತಿನ್ನಲು ಅನ್ನಕ್ಕಿಂತ ರಾಗಿಯೇ ಲೇಸೆಂದರು
ಹೊಟ್ಟೆ ತುಂಬಾ ಹಿಟ್ಟು ಬಾಯಿ ತುಂಬಾ ಅನ್ನ
ಜೋಳದ ಜೊತೆಗೆ ನವಣೆ ತಾಳಲಾರದ ಬವಣೆ
ಒಡಲು ಮುಚ್ಚಿ ಉಡಲು ಸವೆದುಹೋದ ವಸನ
ಅಗತ್ಯವಿರಲಿಲ್ಲ ವಾಕಿಂಗ್ ಜಿಮ್ಮು ಯೋಗಾಸನ
ಹಳ್ಳಿಯ ಕಾರು ಎಂದರೆ ಜೋಡೆತ್ತಿನ ಗಾಡಿ
ಹಳ್ಳಿಕಾರ್ ಎತ್ತಿನ ಜೊತೆ ಹೊಲದೊಳು ನಡಿ
ದೇಸಿ ಹಸುವಿನ ಅಮೃತದಂತಹ ಹಾಲು ಕುಡಿ
ಇದ್ದರೆ ಮುದ್ದೆ ಇಲ್ಲದಿದ್ದರೆ ಸೊಪ್ಪು ಸದೆ ಜಡಿ
ಉರವರೆಲ್ಲರೂ ನಮಗೆ ಸೋದರ ಒಡನಾಡಿ
ಊರ ಯಜಮಾನರೆ ನ್ಯಾಯಾಂಗ ಕಟ್ಟು ನಿಟ್ಟು
ಹಾದಿ ತಪ್ಪಿ ನಡೆದರೆ ತಪ್ಪಿಸಲಾಗದು ಛಡಿಯೇಟು
ಊರ ಹೊರಗಷ್ಟೆ ಹೆಂಡದಂಗಡಿ ಕುಡುಕರಿಗಾಗಿ
ಕುಡಿದು ಊರೊಳ ಬಂದ್ರೆ ಇಡುಗಂಟು ದಂಡಕ್ಕಾಗಿ
ಕಾಯಕದ ಹುಡುಕಾಟ ಇರಲಿಲ್ಲವಂದು ಜೀವನಕ್ಕಾಗಿ
ದುಡಿಯಲೇ ಬೇಕಿತ್ತು ಮನೆ ಮಂದಿಯ ಕ್ಷೇಮಕ್ಕಾಗಿ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೮/೧೨/೨೦೧೭
Comments
Post a Comment