ಬಡತನ ಸ್ವಾಭಿಮಾನ
ಬಡತನ ಸ್ವಾಭಿಮಾನ
~~~~~~~~~~~
ಅರೆ ಆಯಸ್ಸಿಗೆ ಬಾಗಿದ ಒಡಲು
ಐದು ಮಕ್ಕಳ ಹೆತ್ತಿರುವ ಮಡಿಲು
ಸುಖ ಎಂಬುದು ಕಾಣದ ಕಡಲು
ತವರಿನ ಬೆಂಬಲವಿಲ್ಲ ಒಡಂಬಡಲು
ಇನಿಯನ ಶವವದು ಜಮೀನಿನಲ್ಲಿ
ಆಸ್ತಿಯ ಹಕ್ಕು ನ್ಯಾಯಾಲಯದಲ್ಲಿ
ದುಡಿಯಬೇಕಿದೆ ಅನ್ಯರ ಹೊಲದಲ್ಲಿ
ಯಾಕೆಂದರೆ ಬದುಕಲೇಬೇಕಿದೆ ಇಲ್ಲಿ
ಸಿರಿತನದ ಬದುಕು ಬಯಸಲಿಲ್ಲ
ಬಡತನದ ಗಡಿಯ ದಾಟಲಾಗಿಲ್ಲ
ವಿದ್ಯೆ ಒಳಮನೆಗೆ ಅಡಿಯಿಡಲಿಲ್ಲ
ಹಳ್ಳಿಯ ಜೀವನದ ಅರಿವಿರಲಿಲ್ಲ
ಪುಂಡ ಪುರಜನರ ಸಹಾಯದ ಹಂಗಿಲ್ಲ
ಮಡಿಯುವವರೆಗೂ ದುಡಿಮೆ ತಪ್ಪಿದ್ದಲ್ಲ
ಯಾರದೇ ಮುಲಾಜು ಎಂದೆಂದಿಗೂ ಬೇಕಿಲ್ಲ
ಆತ್ಮ ತೃಪ್ತಿ ಸ್ವಾಭಿಮಾನ ಜೊತೆಗಿರೆ ಸಾಕಲ್ಲ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೪/೧೨/೨೦೧೭
Comments
Post a Comment