ನೇಗಿಲ ಯೋಗಿ ದಿನಾಚರಣೆ
ನೇಗಿಲ ಯೋಗಿ ದಿನಾಚರಣೆ
~~~~~~~~~~~~~~~
ಅಂದು ನಾಗರೀಕತೆ ಶುಭಾರಂಭ
ಮಾನವನ ಸಾಮಾಜಿಕ ಬದುಕು
ಗಣನೀಯ ಮಟ್ಟದಲ್ಲಿ ಆರಂಭ
ಅದಕ್ಕೆಂದೇ ಆರಂಭದ ಪ್ರಾರಂಭ
ಪುಟ್ಟದೊಂದು ಗೂಡು ಬೇಡು
ಹುಲ್ಲು ಹೊದಿಕೆಯ ಹಾಸಿ ಮಾಡು
ಜಗದೆದರು ಹೂ ನಗುವ ನೋಡು
ಬಹು ಖುಷಿಯಾಗಿಹೆ ನೀಡು
ದಿನಗಳೆದು ನವನವೀನ ಅವಿಸ್ಕಾರ
ಫಲವತ್ತಾಯಿತು ನವಜೀವನ ಸಾರ
ಇತ್ತೀಚೆಗೆ ವ್ಯವಸಾಯ ಬಲು ಬಾರ
ರೈತನ ಬದುಕದು ಅತ್ಯಂತ ದುರ್ಬರ
ಆರಂಭವೂ ಯಂತ್ರದಿಂದ ಆರಂಭ
ಮನುಜನ ಅವನತಿಯ ಪ್ರಾರಂಭ
ಅನಾರೋಗ್ಯ ಅನಾಮತ್ತು ಆರಂಭ
ಕೂತು ತಿನ್ನಲು ಬೇಕು ಹಣದ ಕುಂಭ
ಎಲ್ಲದಕ್ಕೂ ಒಂದೊಂದು ಆಚರಣೆ
ಶತಮಾನ ಕಳೆದೂ ಸಂಭ್ರಮಾಚರಣೆ
ನೇಗಿಲಯೋಗಿಗೆ ಇಂದು ದಿನಾಚರಣೆ
ಸಂಭ್ರಮಿಸಿ ಬನ್ನಿರೆಲ್ಲರು ಶರಣ ಶರಣೆ
ವೈಲೇಶ ಪಿ ಯೆಸ್ ಕೊಡಗು
ಕರಾರಸಾಸಂಸ್ಥೆ ಮಡಿಕೇರಿ ಚಾಲಕರು
೨೩/೧೨/೨೦೧೭
Comments
Post a Comment