ರಾಷ್ಡೀಯತೆ

ರಾಷ್ಟ್ರೀಯತೆ
~~~~~~~~~

ಹುಟ್ಟು ಸಾವಿಗೂ ಕಡಿಮೆ ಅಂತರ
ಬಿಟ್ಟು ಹೋಗುವ ಮಹಿಮೆ ಎಂಟರ
ಬರುವಾಗ ತಂದಿದ್ದು ಕೇವಲ ತನುವೆ
ಹೊರಟು ಒಯ್ಯುವುದು ಕೌಪೀನವೆ || ಪ||

ಮೂರು ದಿನದ ಬಾಳು ದಿನ ನಿತ್ಯ ಗೋಳು
ಎಡವಿ ಬಿದ್ದರೆ ಹೋಳು ಎದ್ದರೆ ಸುಬಾಳು
ಹಗೆತನವ ತೊರೆದು ಹಸನಾಗಲಿ ಹೆಸರು
ಹೇಳಲಾದೀತೆ ಕಲಿತು ಕೊಳೆಯುತಿರೆ ಕೆಸರು ||೧||

ಜಾತ್ಯಾತೀತ ಇರಲಿ ಮರೆತಿರೆ ಜಾತೀಯತೆ
ಆಗುಂಬೆಯ ಮಳೆಯ ತೆರದಿ ಮೆರೆಯದಿರೆ
ಗೋಸುಂಬೆಗೂ ಮಿಗಿಲು ಅಮಾನವೀಯತೆ
ಮೂಡಿ ಬರಬೇಕಿದೆ ಏಕತೆ ರಾಷ್ಟ್ರೀಯತೆ||೨||

ಮನ ಮನದ ಅಂತರ ನಿತ್ಯ ನಿರಂತರ‌
ನಾವೇ ಸೃಷ್ಟಿಸಬೇಕಿದೆ ನವ ಮನ್ವಂತರ
ಏನಿದೆ ಹುಟ್ಟು ಸಾವು ಮುಗಿದ ಅನಂತರ
ಅರಿಯದೇ ಸಾಗಿದೆ ಬದುಕು ಆವಾಂತರ. ||೩||

*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೭/೯/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ