ಅಕಾಲ ಮಳೆ

ಅಕಾಲ ಮಳೆ
~~~~~~~~
ಅರಳಿಹುದು ಅಕಾಲ ಮಳೆ
ಕುಡಿದಿಹುದು ಸಕಲವ ಇಳೆ
ಕಾದಿದ್ದಹುದು ಬೆಳೆದಿಹ ಬೆಳೆ
ಕೇಳಲೆಂದು ಬಳೆಯ ಕಹಳೆ

ಕಣದಲ್ಲಿ ನೀರಲ್ಲಿ ಉರುಳಿದೆ
ಕಾಫಿ ನೆಲ್ಲು ಅದರೊಳು ಅದೇ
ಮೊಳಕೆ ಒಡೆಯುವ ಗುಲ್ಲು
ಮೊಳಕೆಯೊಡೆದರೆ ರೈತಗೆ ಗಲ್ಲು

ಹರಡಿದ್ದ ಕಾಳು ಕಡ್ಡಿ ಉರುಳಲು
ಇಲ್ಲ ಯಾವುದೇ ತರಹದ ಅಡ್ಡಿ
ಉರುಳುರುಳಿ ಹಳ್ಳ ತೋಡು
ಸೇರಿದರೆ ರೈತನಾಸೆಗೆ ಹಳ್ಳ ತೋಡು

ಬೇಕಿತ್ತು ಬುವಿಗೆ ದಾಹವಿತ್ತು
ನರಮನುಜಗೆ ಅಹಾರವಿತ್ತು
ನಡೆಯಬೇಕಿದ್ದ ಮಳೆಯಿಂದು
ಸುರಿದಿದೆ ತಿಳಿಸದೇ ಹಿಂದು ಮುಂದು
ಕಾವೇರಿ ಮಾತೆ ಮಳೆಗೆ ತಿಳಿಸು ಬಂದು

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧/೧೨/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ