ಗಜಲ್ -೭
ಗಜಲ್-೭
~~~~~~
ಸಿಂದೂ ನದಿಯ ತಟದಿ ನಾಗರೀಕತೆಯ ಆರಂಭ
ಅಂದೇ ಮೊದಲ ತಳದಿ ಅನಾಗರಿಕತೆಯ ಆರಂಭ
ಸೂರಿಗಾಗಿ ಬೆಳೆದ ಮರ ಹನನದ ಜೊತೆ
ಹಸಿವಿಗೆ ಧರೆಯ ಬೆಳೆ ವ್ಯವಸಾಯ ಆರಂಭ
ಬದುಕುವ ಬಯಕೆಗೆ ಸಕಲವ ಬಳಸಿ
ಜೀವಿಸುವ ನೆಪದಿ ಪ್ರಾಣಿ ಹತ್ಯೆಯ ಆರಂಭ
ನೆಲ ಜಲದ ನೆಪದಿ ಅಸಮಾನತೆ
ಹಿರಿಕಿರಿಯ ನಾಮ ಜಾತೀಯತೆಯ ಆರಂಭ
"ಸಿಡಿಲು"ನ ಮನದಿಚ್ಛೆ ಮೂಡಿ ಬರಲಿ ಸಕಲ
ಮನದೊಳು ಮಾನವೀಯತೆಯ ಆರಂಭ
ವೈಲೇಶ ಪಿ ಯೆಸ್
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧/೧೨/೨೦೧೭
Comments
Post a Comment