ಪೆಚ್ಚುತನ

ಪೆಚ್ಚುತನ
~~~~~

ಒಂದಷ್ಟು ಹೆಚ್ಚೇ ಹುಚ್ಚುತನ
ಇನ್ನೊಂದು ಹೆಜ್ಜೆ ಪೆಚ್ಚುತನ
ಕಾಡುವದೈ ಮತ್ತೆ ಹೆಚ್ಚುತನ
ಕಳೆದುಕೊಳ್ಳದಿರಿ‌ ತಮ್ಮತನ

ನಾನೇ ಎಂಬುದ ಮರೆಯಿರಿ
ನಾವೇ ಎಂದಂದು ಮೆರೆಸಿರಿ
ದುಃಖ ನೋವನು ಮರೆಸಿರಿ
ಸುಖ ಸಂತೋಷವ ಬೆಳೆಸಿರಿ

ಹುಚ್ಚು ಮನಸ್ಸಿನ ಕಿಚ್ಚು ಏತಕೆ
ಹಂಚಿ ಹರುಷವ ಬಾಳ ಬಾರದೆ
ಇಂದು ಅವರಿಗೆ ದ್ವೇಷ ಕಾರಿರೆ
ಮತ್ತೆ ಮರಳಿಸಿ ನಿಮಗೆ ಕಾದಿದೆ 

ಎಷ್ಟೇ ಹೆಚ್ಚುಗಾರಿಕೆ ಇದ್ದರೇನು
ಏನೇ ಸಂಪಾದನೆ ಮಾಡಿದ್ದರೇನು
ಹೋಗುವಾಗ ಬರಿಗೈ ಅಲ್ಲವೇನು
ಇದನ್ನರಿಯದೇ ನಾವು ನೀವೇನು

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೫/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು