ಕೆಂಪಾಗಿದೆ ಗಲ್ಲ
ಕೆಂಪಾಗಿದೆ ಗಲ್ಲ
~~~~~~~~~~
ನೆನಪಾಗಿದೆ ಗೆಳೆಯ ನಿನ್ನ ನಗು
ನವಿರಾಗಿದೆ ಎಳೆಯ ರವಿ ಮಗು
ಒಲವ ಹಾಡ ಮನದಲಿ ಗುನುಗು
ಬಾಳನೌಕೆ ಹಣತೆಯೇ ಮಿನುಗು
ಅಂದು ನೀನೆಂದೆ ಬಳಿಸಾರಿ ಬಂದು
ಅಪ್ಪಿಕೊಳ್ಳಲೇ ಮರಿಕೋತಿ ಎಂದು
ಒಪ್ಪಿಕೊಳ್ಳಲು ಮನವಿತ್ತು ಗೆಳೆಯಾ
ಕೈಚಾಚುವ ಮುನ್ನ ಅಗಲಿ ಹೋದೆಯಾ
ಬಂದೊಮ್ಮೆ ಮಲಗಿಸು ನಿನ್ನೀ ತೋಳಲ್ಲಿ
ಒಂದೊಮ್ಮೆ ಮೆರೆಯಿಸು ಈ ಬಾಳಿನಲ್ಲಿ
ಬೇಡೆಂದು ಬೈವವರು ಇಂದಿಲ್ಲ ಇನಿಯಾ
ಅನುಮತಿಯ ನೀಡುವೆ ಬಾ ನನ್ನ ಸನಿಹ
ಮರೆತು ಕರೆಯದೇ ಬಂದವಳು ನಾನಲ್ಲ
ಅರಿತು ಬೆರೆಯದೆ ಹೋದೆಯ ನೀ ನಲ್ಲ
ನಿನ್ನಯ ನೆನಪಿಗೆ ಕೆಂಪು ಕೆಂಪಾಗಿರೆ ಗಲ್ಲ
ಒಲುಮೆ ಉದ್ದರಿಸು ತೋರಿ ಬಾಳೆಲ್ಲಾ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೪/೧೦/೨೦೧೭
Comments
Post a Comment