ತರವಲ್ಲ ನಮಗೆ

ತರವಲ್ಲ ನಮಗೆ
~~~~~~~~~~

ಕೊಡಲಾರದ ಬಿಡಲಾರದ ದೇವತೆ
ಎಂದರೆ ಅವ್ವ ಎನ್ನಿ
ಅವ್ವ  ಬಿಟ್ಟು ಹೋದ ಮೇಲೂ ನಮ್ಮ
ಪೊರೆವವಳು ಅವನಿ

ಅವನಿಗೆಂದು ಅವನಿವನೆಂಬ| ಬೇದ ಭಾವವಿಲ್ಲ |
ತನ್ನೊಡಲಾಳದಲ್ಲಿ |ಯಾರಿಗೂ ಸ್ಥಳವಿಲ್ಲ |ಎಂದವಳಲ್ಲ|
ಕಡು ಮೂರ್ಖ ಮಗನೂ |ಐನಾತಿ ವಂಚಕನೂ |
ಏಕ ರೀತಿಯಲಿ ಕಾಣುವ| ಏಕೈಕ ಧರೆ ಈ ವಸುಂಧರೆ||೧||

ನಾ ತಿನ್ನದೆ ಹೋದರೂ| ಎನಗೆ ದಕ್ಕದೆಂದು ತಿಳಿದರೂ|
ಮುನ್ಕುಲಕೆ ಇರಲೆಂದು| ಅಜ್ಞಾನದಿ ಇಂದು ಮುಂದಿರುವ|
ನನ್ನದೇ ವಾರಸುದಾರರಿಗೆ| ಅನ್ಯಾಯ ಹಣಿದಿರುವೆವು|
ಮುಂದಿನ ಪೀಳಿಗೆಗೆ ನಾವು|ಮಾಡುತ್ತಿರುವುದು ಒಳಿತಲ್ಲ||೨||

ಏನೇ ಮಾಡಿದರದು ಮುಗಿವುದು|ಅಂದಂದು ಮಾಡಬೇಕಿದೆ|
ನಾವಿಂದು ಅಳಿದು ಹೋದರೂ| ಅಳಿಯದಂತೆ ಯಾರೂ ಎಂದು|
ಮಾಡದ ಅರ್ಪಣೆಯ ಈ ಜಗಕೆ| ಒನಕೆಯೇ ಕೊಡಲಿಯ ಕಾವೇ|
ಎಂದಿಗೂ ನಮ್ಮ ಶತ್ರು ಎಂದರಿತು||೩||

ಏನ ಮಾಡಿದರೇನು| ಧರಣಿಗೆ ಸಾಟಿಯೇನು|
ಶತಮಾನದ ಮರವ|ಕ್ಷಣದಲ್ಲಿ ಉರುಳಿಸ ಕಲಿತ|
ನಮಗೆ ಕ್ಷಣದಲ್ಲಿ ಮರ| ತರುವ ಅರಿವು ಬಾರಲಿಲ್ಲ|
ನೀರು ನೀರೆಂದು ಸೂತ್ರ ಹೇಳುವ
ನಾವು| ಮಳೆಯಿಲ್ಲದೇ ನೀರು ತಾರಲಾರೆವು |
ಸೃಷ್ಟಿಸಲು ಅರಿಯದೆಲೆ ಸಂಹರಿಸುದು
ಸರಿಯೇನು ತರವಲ್ಲ ನಮಗೆ||೪||

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೫/೮/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ