ನ್ಯಾನೊ ಕಥೆಗಳು

ನ್ಯಾನೋ ಕಥೆಗಳು
@@@@@@@@

ಹಾಲು
******"
ಆಗರ್ಭ ಶ್ರೀಮಂತ ತನ್ನ ಶರೀರ ಹೊರಲಾರದೇ ದೇವರ ಅಭಿ಼ಷೇಕಕ್ಕೆಂದು ಹಾಲು ಒಯ್ಯುತಿದ್ದ.
ಬಡವಿಯೋರ್ವಳು ತನ್ನ ಮಗುವಿಗೆ ಹಾಲುಣಿಸಲು ತನ್ನ ಆಹಾರ ಸೇವಿಸಲೆಂದು ದೇವಸ್ಥಾನದ ಪ್ರಸಾದಕ್ಕಾಗಿ ಕಾದು ಕುಳಿತಿದ್ದಳು.

ಆಸ್ಪತ್ರೆ
~~~~~

ಊರಿಗೆ ಶ್ರೇಷ್ಠವಾದ ಆಸ್ಪತ್ರೆ ಕಟ್ಟಿಸಿದ ವೈದ್ಯರು ತಮಗೆ ಅಂಟಿದ ಅರ್ಬುದ ರೋಗದ ಚಿಕಿತ್ಸೆಗೆ ಮಾಡಿಸಲೆಂದು ಮಾಸದಲ್ಲಿ ಮೂರು ಬಾರಿ ವಿದೇಶಕ್ಕೆ ತೆರಳುತಿದ್ದರು.

ಜಾತಿ ವಿರೋಧಿ
~~~~~~~~~
ಅಪ್ಪಟ ಜಾತೀಯತೆ ವಿರೋಧಿಯೊಬ್ಬನ ಮಗಳು ಅನ್ಯ ಜಾತಿಯವನೊಡನೆ ಓಡಿ ಹೋದಾಗ ತಲೆ ಮೇಲೆ ಕೈ ಹೊತ್ತು ಕುಳಿತನು.

ಜಾತ್ಯಾತೀತತೆ
÷÷÷÷÷÷÷÷÷÷
ಎಲ್ಲಾ ಕಡೆ ಜಾತೀಯತೆ ವಿರೋಧಿಸಿ ಕಡು ಭಾಷಣ ಮಾಡುವವ ತನ್ನ ಜಾತಿಯವರಿಗೆ ಆಧ್ಯತೆ ನೀಡಲೊಸುಗ ಅನ್ಯ ಜಾತಿಯವರ ವಿರುದ್ಧ ತನ್ನದೇ ಜಾತಿಯವರನ್ನು ಎತ್ತಿ ಕಟ್ಟಿದ.

ಲೈಂಗಿಕ ಕಿರುಕುಳ
~~~~~~~~~~~
ಏನೇ ಹೆಡೆಮುರಿ ಕಟ್ಟಿದರೂ ಎದುರಾಳಿಯ ವಿರುದ್ಧ ಗೆಲುವು ಸಾಧಿಸಲಾರದೇ ಕೊನೆಗೆ ಆತನ ವಿರುದ್ಧ
ಮಹಿಳಾ ಲೈಂಗಿಕ ದೌರ್ಜನ್ಯ ಕಿರುಕುಳದ ಕಾನೂನು ಜಾರಿಗೊಳಿಸಿದರು.

#ಸಿಡಿಲು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೭/೧೦/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ