ಗಜಲ್ ನಂ ೦೧
ಗಜಲ್ ೦೧
~~~~~~~
ನನ್ನೊಲವ ಉಣಬಡಿಸಿ ನಿನ್ನ ಮೆರೆಸುವೆ ಗೆಳತಿ ಬಾಳ ಹಾದಿಗೆ ಜೊತೆಯಾಗಬಲ್ಲೆಯಾ
ನಿನಗಾಗಿ ಸಕಲವನ್ನೂ ತ್ಯಜಿಸುವೆ ನನ್ನೊಡತಿ ನನ್ನ ಗೆಲುವಿಗೆ ಜೊತೆಯಾಗಬಲ್ಲೆಯಾ.
ಎಳವೆಯಲಿ ಅರಳಿಸಿದ ಆಸೆಗಳನು ಅಂದೇ ನೀ ಮರೆತಿರುವೆ ಗೆಳತಿ
ಬಡತನದ ಜೊತೆಗೆ ಜವಾಬ್ದಾರಿ ಹೊತ್ತಿದ್ದ ಎನ್ನ ಬಿಟ್ಟು ಹೋದವಳೇ ಮತ್ತೆ ಜೊತೆಯಾಗಬಲ್ಲೆಯಾ.
ಅಕ್ಕ ತಂಗಿಯರು ಬೇಡವೆಂದರೂ ಮನದೊಳಗೆ ನಿನ್ನ ಆರಾದಿಸಿದೆ ಗೆಳತಿ
ಇಂದು ಅವರಾರು ಜೊತೆಗಿಲ್ಲ ಮರಳಿ ಬರುವವರಲ್ಲ ಮರಳಿ ಹೊರಳಿ ಜೊತೆಯಾಗಬಲ್ಲೆಯಾ.
ನನಗೆಂದು ನಾನೇನು ಮಾಡಿಲ್ಲ ನಿನಗೆ ಕೊಡಲೇನು ನನ್ನಲ್ಲಿ ಉಳಿದಿಲ್ಲ ಗೆಳತಿ
ನಿನ್ನ ಶರೀರವಲ್ಲದೇ ಹಿಡಿ ಮುಷ್ಠಿ ಪ್ರೀತಿಯಿಂದ ಪುಷ್ಟಿ ಕೊಡಲೆಂದು ಜೊತೆಯಾಗಬಲ್ಲೆಯಾ.
ಶರಾಬಿನ ಪಾತ್ರೆಯಲಿ ಕ್ಣಣ ಕ್ಷಣವೂ ನಿನದೇ ಬಿಂಬ ತುಂಬಿದೆ ಗೆಳತಿ
ಶರಾಬಿನ ಜೊತೆಯಲ್ಲಿ ಉಸಿರು ಬೆರೆಯುವ ಮುನ್ನ ವೈಲೇಶನ ಜೊತೆಯಾಗಬಲ್ಲೆಯಾ.
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೪/೧೦/೨೦೧೭
Comments
Post a Comment