ಅವನ ನಿಯಮ
ಅವನ ನಿಯಮ
~~~~~~~~
ಈಶ್ವರ ಇಟ್ಟ ನಿಯಮ ಇದುವೆ
ಅಲ್ಲಾಹು ಕೊಟ್ಟ ಜಗತ್ತು ಇದುವೆ
ಯಾರೇ ಸತ್ತರು ಯಾರೇ ಅತ್ತರೂ
ಮನುಜರ ಮನಸಿಗೆ ಬರೀ ನೋವೆ
ಯಾತಕೋ ಮನುಜ ನೀನರಿಯೆ
ಸಕಲರ ಸೊತ್ತು ದುಡಿದು ಗಳಿಸಿದ್ದೇ
ಇರುವುದೆಂದಿಗೂ ಅದು ಬಳಸಲೆಂದೇ
ಸುಮ್ಮನೆ ಸುಡುವಿರೇಕೆ ಗೆಳೆಯರೇ
ಎಲ್ಲರಿಗೂ ಬಂದು ಬಳಗದ ಸಂಬಂಧ
ಕೊಂದರೆ ಉಳಿವುದೇ ಅನುಬಂಧ
ಧರ್ಮವು ನುಡಿಯದು ಕೊಲ್ಲೆಂದು
ನುಡಿದಿರೆ ತೋರಿಸಿ ಎಲ್ಲಿದೆಯೆಂದು
ಭಗವದ್ಗೀತಾ ಬೈಬಲ್ ಖುರಾನ್
ಮಹಾಗ್ರಂಥಗಳು ವಿಶ್ವ ಮಹಾನ್
ಉಳಿಸಲಿ ಮಾನವ ಸಂಬಂಧ
ರಕುತದ ಬಣ್ಣ ಒಂದೇ ಅಣ್ಣ
ದ್ವೇಷ ಅಸೂಯೆಯ ಅಳಿಸಣ್ಣ
ಧರ್ಮ ಅಧರ್ಮವ ನಿಂದಿಸಿ ಕರ್ಮ
ಅರಿಯಿರಿ ಸಕಲ ಧರ್ಮದ ಮರ್ಮ
ಮನುಜ ಧರ್ಮವೆ ಉನ್ನತ ಧರ್ಮ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೯/೧೦/೨೦೧೭
Comments
Post a Comment