ಏನೀ ಅಚ್ಚರೀ
ಏನೀ ಅಚ್ಚರೀ
~~~~~~~~
ಅಡವಿಯ ಅರಿಯದೇ ಅದರೊಳು ನುಸುಳಿರೆ
ಆಧ್ಯ ಸ್ವಾಗತ ಗೈದವರು ಜಿಗಣೆರಾಯರು
ನೆತ್ತರ ಹೀರುತಲಿದ್ದರೂ ಅರಿವಿಲ್ಲ ಇನಿತಾದರೂ
ಕಾಲಿಗಂಟಿ ಕೆಸರಾದಾಗ ಬೊಬ್ಬಿರಿಯುವಂತಾಯ್ತು
ಕೋಪದಿ ಕಿತ್ತೆಸೆದು ಮುಂದೆ ಸಾಗಿದೆ ವೀಕ್ಷಿಸಲು
ಎನೀ ರುದ್ರ ರಮಣೀಯ ಕರ್ಣ ಮನೋಹರ
ತಾಳ ಮೇಳ ಮೇಳೈಸಿ ಹಕ್ಕಿಗಳ ಸ್ವರ ಇಂಚರ
ಗಾಳಿಯು ಬೀಸಿ ತೂಗಿಸಿ ಉಯ್ಯಾಲೆಯ ತರ
ಮೈಮರೆತು ಆಲಿಸಿರೆ ದಂಗಾಯಿತು ಕೇಳಿ ಮರ
ಬೆಸೆದು ಹೊರಹೊಮ್ಮಿದ ಬೀಕರ ಮರ್ಮರ
ಅಲ್ಲಿ ನೋಡಿ ಓಡಿದೆ ನವಿಲು ಚಿಗರೆ ಸಾರಂಗ
ನಮ್ಮ ಆಗಮನವೇ ಅವುಗಳ ಜೀವನ ಭಂಗ
ಹೇಗೋ ಬದುಕುತಿವೆ ಜಾರಿ ಏರಿ ಗಿರಿ ಶೃಂಗ
ನಡೆದಿದೆ ಗಜಪಡೆಯು ನಮ್ಮ ಹಿಂಡು ಕಂಡು
ಹಾರಿವೆ ಬಾನಾಡಿ ಕಾಡು ಹಣ್ಣುಗಳನು ಉಂಡು
ಅತಿಯಾಗಿ ಒಳಹೋಗದೇ ಹಿಂತಿರುಗಿದೆ
ಒಳಮನಸು ಹೇಳಿತು ತೊಂದರೆಯಾಗಿದೆ
ನಿನ್ನಿಂದಲೇ ನಡೆ ಬಡಬಡಿಸದೆ ಇರುಳಾಗಿದೆ
ಹೊತ್ತು ಮುಳುಗುವ ಮುನ್ನ ಸೇರಬೇಕಾಗಿದೆ
ನಿನ್ನನ್ನೇ ನಂಬಿದ ಮನೆ ಸಂಸಾರ ಕಾಯುತ್ತಿದೆ
ಸಿಡಿಲು
ವೈಲೇಶ ಪಿ ಯೆಸ್
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೫/೧೦/೨೦೧೭
Comments
Post a Comment