ಕಮಲ ದಳ

೧ ಕಮಲ ದಳ
~~~~~~~~~
ಬಿರಿದಿದೆ ತಾವರೆ ಘಮ ಘಮಿಸಿ
ಮುದುಡಿದ ಮನವಾ ಬದಿಗಿರಿಸಿ
ನಗುಮೊಗ ತೋರೆಯ ಕನಿಕರಿಸಿ
ಒಲವಿನ ಸಿಹಿಯಲಿ ಮನ ಕುಣಿಸಿ ||ಪ||

ಬಾಲ ಶಶಿ ಅರಳಿಸಿ ಕಮಲ ದಳ
ಕನಸನು ಮರಳಿಸಿ ಚೆಲುವುಗಳ
ಗೆಳೆಯನ ಸೆಳೆಯಲು ಪಳಾಪಳ
ಚೆಲ್ಲುತ ನಿಂತಿದೆ ಝಳಕು ಝಳ. ||೧||

ಮನದಲಿ ಮೂಡಿ ಬರೇ ಅಮಲು
ಅಧರವು ಬಯಸಿ ನಿನ್ನೀ ಘಮಲು
ಅಳಿಸಲು ಬಾರ ಮನದ ತುಮುಲು
ಹರಿಯಲಿ ಒಲವ ಸುಧೆ ಹೊನಲು  ||೨||

ಹೋದರೆ ದೂರ ಮನವದು ಬಾರ
ತನುವಿನ ತಮವ ಕಳೆಯಲು ಸೇರ
ಇನಿಯನೆ ಸವಿನುಡಿ ನನಗೆ ಆಧಾರ
ಅರಿಯದೆ ತೆರಳುವ ಜಗದಿಂ ದೂರ  ||೩||

*ವೈಲೇಶ ಪಿ ಯೆಸ್ ಕೊಡಗು*
*ಕರಾರಸಾಸಂಸ್ಥೆ ಮಡಿಕೇರಿ ಚಾಲಕ*
೨೧/೯/೨೦೧೭
[

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ