ಕಾಲ ಸಾಕ್ಷಾತ್ಕಾರ
೧ ಕಾಲ ಸಾಕ್ಷಾತ್ಕಾರ
~~~~~~~~~~~
ನಿಲ್ಲಲಾರದು ಎಂದರಿಯದೆ ಅಧಿಕಾರ
ನಿಲುಗಡೆಯೇ ಇಲ್ಲದಾಗಿದೆ ಅಹಂಕಾರ
ನಿಲ್ಲುವುದೇ ಕಾಲ ನಿಸ್ವಾರ್ಥ ನಿರಾಕಾರ
ನೀಡುವುದು ಕಾಲ ತಂಗಾಳಿ ಸಾಕ್ಷಾತ್ಕಾರ
ನಾನು ನನ್ನದು ನನ್ನ ಸಂಸ್ಥೆ ನನ್ನ ಕಚೇರಿ
ಇವೆಲ್ಲ ಎಂದೂ ಶಾಶ್ವತ ಅಲ್ಲ ಸುಮ್ನೇರಿ
ದುಡಿದಿದ್ದು ಕಳೆದಿದ್ದು ಏನೇನು ಅಲ್ಲರಿ
ಹೊತ್ತು ಕೊಂಡು ಹೋಗೋದಿಲ್ಲ ಬಿಡ್ರಿ
ಇರೋವರೆಗೆ ಅಧಿಕೃತ ಅಂಧ ಅಧಿಕಾರ
ಕಳೆದ್ಹೋದ್ರೆ ಕಳೆಯಿತು ನಮ್ಮ ಚಮತ್ಕಾರ
ಇದ್ದಾಗ ತೋರಿದ ದರ್ಪ ಕುಹಕದ ಸಾರ
ಹಿಂತಿರುಗಿ ತೂರುವವು ನಮಗೆ ದಿಕ್ಕಾರ
ಅಧಿಕಾರ ಅಹಂಕಾರ ಎಂಬ ಅಂಧಾಕಾರ
ಅಧಿಕ ಇದ್ದರದು ಬಾಳ್ವೆ ಭಾಗಿಸೊ ಆಕಾರ
ಸಿಗಲಾರದು ಎಂದಿಗೂ ಒಲವ ಮಮಕಾರ
ಆಗದು ಅಹಂ ಮಾನವೀಯತೆಯ ಹರಿಕಾರ
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೨೨/೯/೨೦೧೭
Comments
Post a Comment