ಮನದ ಒಡವೆ.
ಮನದ ಒಡವೆ ೧
~~~~~~~~~
ಅಳುತಾ ನಗಿಸುತಾ ಬರುವೆ
ಅಳುತಾ ಅಳಿಸುತಾ ನಡೆವೆ
ಎರಡು ಅಳುವಿನಾ ನಡುವೆ
ನಗುವೇ ಮನಸಿನಾ ಒಡವೆ ||ಪ||
ನೀಲಾಕಾಶದಿ ತಾರೆಗಳು ಚುಕ್ಕಿ
ಚಂದ್ರಮ ಬುವಿಗೆ ತಂಪನ್ನು ಇಕ್ಕಿ
ಭಾಸ್ಕರನು ಸಕಲರಿಗೆ ಅನ್ನವನಿಕ್ಕಿ
ತೋರಿಕೊಂಬರೆ ಹಿರಿಮೆಯ ಹೆಕ್ಕಿ
ಹಲಕೆಲ ಮನಸ್ಸದೋ ಅವಲಕ್ಕಿ
ಶಕುನಿಯ ಉದರ ಬೇನೆ ಉಕ್ಕಿ
ಬೇಯುವರು ಕಿಚ್ಚಿನ ವಿಷವ ಕಕ್ಕಿ
ಸೋಲೆಂಬುದು ಅಧರ್ಮಕೆ ನಿಕ್ಕಿ
ತನುವ ಉಸಿರು ಮೇಲಕ್ಕೆ ಹಾರಿ
ಇಡುವರೇನು ಸಮಯವ ಮೀರಿ
ಪ್ರಕೃತಿಯೊಡಲಲಿ ಚಿರನಿದ್ರೆಗೆ ಜಾರಿ
ಮತ್ತೇತಕೊ ಅರಿಯೆ ಜಗದ ಈ ಪರಿ
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೬/೧೦/೨೦೧೭
Comments
Post a Comment