ಅವನದೇ ಜಗವು

ಅವನದೇ ಜಗವು
~~~~~~~~~

ತೀರವ ಸೇರುವ ತವಕದಲಿ
ಸುಖ ದುಃಖಗಳ ಅಲೆಗಳಲಿ
ಮೊರೆಯುತ ಮೆರೆಯುವ ಕಡಲಲ್ಲಿ
ತೇಲುತಾ ಸಾಗುವ ಜಹಜಿನಲಿ ||ಪ||

ನೋವು ನಲಿವು ತಾ ಬರಲಿ
ಅಂಜದೆ ಅಳುಕದೆ ನಗುವಿರಲಿ
ಸ್ಥೈರ್ಯವು ಮನದ ತುಂಬಿರಲಿ
ಧೈರ್ಯವು ಜೊತೆಯ ಬಿಡದಿರಲಿ ||೧||

ಮಾತೆಯ ಮಮತೆಯ‌ ಮಡಿಲಲ್ಲಿ
ಮಲಗಿದ ಕಂದನ ಮೊಗವಿರಲಿ
ಚಂದ್ರನ ತಂಪಿನ ಮೆರುಗಿರಲಿ
ಜೀವನ ಪ್ರೀತಿಯು ಮೆರೆದಿರಲಿ ||೨||

ಅವನೆದೆ ತುಂಬಲಿ‌ ಸಂತಸವು
ಅವನಿಲ್ಲದೆ ಏನಿದೆ ಜೀವನವು
ಅವನದೆ ಕಾಣಿರಿ ಈ ಜಗವು
ಅವನೇ ಪೊರೆಯಲಿ ನಮ್ಮ ನಗುವು ||೩||

*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೨೦/೯/೨೦೧೭

Comments

Popular posts from this blog

ಭಾಮಿನೀ ಷಟ್ಪದಿ

ಗಝಲ್ ಎಂದರೇನು

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ