ಮನದ ಮಂಡಿಗೆ
೧ ಮನದ ಮಂಡಿಗೆ
~~~~~~~~~~
ಮರೆತೆಯಾದರೂ ಗೆಳತಿ
ಮರೆಯಲಾಗದು ಒಡತಿ
ಮನದ ಹಣತೆಯ ಜ್ಯೋತಿ
ಹಚ್ಚಿ ಹರಿಯಲಿ ಪ್ರೀತಿ.
ಕ್ಷೇಮ ನಾನು ಎಂದೆನ್ನಲಾರೆ
ಕುಶಲವೇ ಎಂದರಿಯಲಾರೆ
ಮನದ ಮಾತಿಗೆ ಉತ್ತರ
ಇಂದೀಗ ನಾನೀಯಲಾರೆ
ಮರೆತೆ ಹೋದೆವು ಗೆಳತಿ
ಬೆರೆತು ಬದುಕಿದ ರೀತಿ
ಮನದಿ ಮಂಡಿಗೆ ಸವಿದು
ಮರೆಯಲಾರೆ ಎಂಬುದು
ಮುಗಿಯುವುದಾದರೂ ಎಂದು
ಯಾರಿಗಾಗದಿರಲಿ ಮುಂದು
ಪ್ರೀತಿ ತುಂಬಿದಾ ಮನವು
ಸಿಡಿಯದಿರಲಿ ತುಂಬಿ ಬಂದು
ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೨೫/ ೯/೨೦೧೭
Comments
Post a Comment