ಬರಬಾರದೆ ಮಳೆ
ಬರಬಾರದೆ ಮಳೆ
₹₹₹₹₹₹₹₹₹₹₹
ತಲ್ಲಣಿಸುತಿದೆ ಇಳೆ
ತರಲಾರದೆ ಬಿರು ಮಳೆ
ಬೆಳೆಯಲಾಗದ ಬೆಳೆ
ಕಸಿದಿದೆ ರೈತನ ಮುಖದ ಕಳೆ
ಹೊಲಗದ್ದೆಗಳ ತುಂಬಾ ಕಳೆ
ಸತ್ತ ಕಳೆಯು ಮೊಳೆತು ಕೂಳೆ
ತುಂಬದೇ ಕಾವೇರಿ ಹೊಳೆ
ರೈತರಿಗೆ ಸಂಕಷ್ಟಗಳ ಮೊಳೆ
ಕುಡಿವ ನೀರಿಗೆ ಹಾಹಾಕಾರ
ಬೆಳೆಯ ನೀರಿಗೆ ತತ್ವಾರ
ತಮಿಳುನಾಡಿನ ಪ್ರಹಾರ
ಹಿಡಿಯಲಾರಿರೇ ಪರಿಹಾರ
ತಡೆಯಲಾರೆವು ನಾವು
ಸುಡುಬಿಸಿಲಿನ ಕಾವು
ಜೀವಸಂಕುಲದ ಸಾವು
ಏರಿದೆ ಬುವಿಯ ನೋವು
ಕಾವೇರಿಯ ಮೂಲ
ಹೀಗಾಗಿದೆಯಲ್ಲ
ಕಾಯುವವರಾರಿಲ್ಲ
ಯಾವ ದೇವ ಬಲ್ಲ
ಇದಕ್ಕೊಂದು ಕೊನೆಯೆಂದು
ವರುಣ ಕಾಯುವನೇ ಎಂದೆಂದು
ಸಂಕ್ರಮಣದ ಹಿಂದು ಮುಂದು
ಈಗಲಾದರೂ ಮಳೆ ಬಂದು
ತುಂಬಲಾರದೇ ಕೆರೆ ಕಟ್ಟೆಗಳು
ಕಳೆಯಲಾರದೆ ಕರುನಾಡ ಕಷ್ಟಗಳು
ಸಿಡಿಲು
ವೈಲೇಶ ಪಿ ಯೆಸ್
ಕೆ ಬೋಯಿಕೇರಿ
ವಿರಾಜಪೇಟೆ 12/10/2016
Comments
Post a Comment