ಬಾರದಿರು ತಾತ
ಬಾರದಿರು ತಾತ
~~~~~~~~~~
ಬ್ರಿಟಿಷರನ್ನು ಓಡಿಸಿದೆಯಾದರೂ
ಇಂಗ್ಲಿಷ್ ಮನಗಳ ಓಡಿಸಲಾರದಾದೆಯಾ
ದೇಶದ ಸ್ವಾತಂತ್ರ್ಯಕೆ ಹೋರಾಡಿದಿರಲ್ಲವೇ.
ನಿಮಗೆ ನಿಮ್ಮ ಜೀವ ಕಾಪಾಡಿಕೊಳ್ಳಲು
ಹೋರಾಡಲಾಗಲಿಲ್ಲವೆ.
ಓ ಗಾಂಧಿ ತಾತ ನೀನು ಇದ್ದಿದ್ದರೆ ಇಂದು
ಗೋಡ್ಸೆಯ ತುಪಾಕಿಯಿಂದ ಹೊರಟ
ಗುಂಡು ನಿನ್ನ ಶರೀರ ತಲುಪಲು ಬೇಕಾದ
ಸಮಯದಷ್ಟು ಬದುಕಲು ಬಯಸುತ್ತಿರಲಿಲ್ಲ
ಎಂದೆನಿಸುತ್ತದೆ. ಸ್ವಚ್ಛ ಸ್ವಚ್ಛವೆಂದಷ್ಟೂ ಸ್ವಚ್ಛಂದ
ಮನಸುಗಳು ಕುಲಷಿತವಾಗಿವೆ ಎಂದೆನಿಸುತ್ತದೆ.
ಏಕೆಂದರೆ ನೀನು ಬಯಸಿದ ರಾಮರಾಜ್ಯ ಇಂದಿಲ್ಲ.
ಆದರೆ ರಾಮರು ಇದ್ದಾರೆ. ಕೃಷ್ಣರು ಇದ್ದಾರೆ.
ರಾಜ್ಯವು ಇದೆ. ಆದರೆ ರಾಮರಾಜ್ಯವಿಲ್ಲ.
ರಾವಣನಿಗಾದರೂ ಕಿಂಚಿತ್ತು ಕನಿಕರವಿತ್ತು.
ಅಹಂಕಾರ ಜೊತೆಗೆ ಭಯ ಭಕ್ತಿ ಇತ್ತು.
ಆತನ ಅಹಂ ಅವನನ್ನು ಕೊಂದಿತು.
ಬ್ರಿಟಿಷರು ಕಲಿಸಿದ ಒಡೆದು ಆಳುವ ನೀತಿ
ಬಹುಮುಖ್ಯ ಭಾಗವಾಗಿದೆ ಇಂದು.
ನಮ್ಮವರೇನು ಕಡಿಮೆ ಇಲ್ಲ. ಬ್ರಿಟಿಷರಿಗಿಂತ
ದರ್ಪ ಅಹಂಕಾರದ ಮೆರವಣಿಗೆಗೆ ಬಲು
ಚೆಂದದ ವಿಧ ವಿಧದ ಹೆಸರುಗಳು ಇಂದು.
ಕೈಮುಗಿದು ಬೇಡುವೆನು ಮತ್ತೆ ಹುಟ್ಟಿ ಬರದಿರು.
ಭಾರತವ ಮರೆತು ಅದೆಷ್ಟು ಸಾಧ್ಯವೋ ಅಷ್ಟು
ದೂರವಿರು .ಮತ್ತೆ ಹುಟ್ಟಿ ಬಂದರೂ ನಿನ್ನನ್ನು
ಅರೆ ಕ್ಷಣ ಬದುಕಲು ಬಿಡಲಾರರು. ನಿನ್ನ ಹೆಸರನ್ನು
ಬಳಸಿದರೂ ನಿನ್ನ ತತ್ವದ ಹೆಸರಲ್ಲಿ
ಅತ್ಮಸಾಕ್ಷಿಯ ಮಾರಿಕೊಂಡಿಹರು
*ವೈಲೇಶ ಪಿ ಯೆಸ್ ಕೊಡಗು*
*ಚಾಲಕ ಕರಾರಸಾಸಂಸ್ಥೆ ಮಡಿಕೇರಿ*
೨/೧೦/೨೦೧೭
Comments
Post a Comment