ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ

ನಾ ಕಂಡಂತೆ ಕವಿ ಸಾಹಿತಿಗಳು;- ಅಭಿಜ್ಞಾ.ಪಿ.ಎಮ್ ಗೌಡ



ಇವರು ಅಭಿಜ್ಞಾ ಪಿ.ಎಮ್.ಗೌಡ.‌

ಸಕ್ಕರೆ ನಾಡು ಖ್ಯಾತಿಯ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮಣ್ಣ, ಪುಟ್ಟಮ್ಮ ದಂಪತಿಯ ಪುತ್ರಿ.  ಅಭಿಜ್ಞಾ.ಪಿ.ಎಂ.ಗೌಡರು ತಮ್ಮ ವಿದ್ಯಾಭ್ಯಾಸವನ್ನು ನಾಗಮಂಗಲದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿ ಯು ಸಿ, ಹಾಗೂ ಬಿ.ಎ. ಪದವಿಯತನಕ ಮುಗಿಸಿ ಬಿ.ಇಡಿ, ಪದವಿಯನ್ನು ತುಮಕೂರಿನಲ್ಲಿ ಪಡೆದುಕೊಂಡಿದ್ದಾರೆ.  ಆ ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಕನ್ನಡ ಸ್ನಾತಕೋತರ ಪದವಿ ಪಡೆದ ನಂತರ ಕನ್ನಡ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. ಪ್ರವೃತ್ತಿಯಲ್ಲಿ ಬರೆವಣಿಗೆ. ಓದುವುದನ್ನು ಬಲವಾಗಿ ಮೈಗೂಡಿಸಿಕೊಂಡು ಸಾಹಿತ್ಯದ ಚಟುವಟಿಕೆಯನ್ನು ಸ್ವಯಿಚ್ಛೆಯಿಂದ ಆಸ್ವಾಧಿಸುತ್ತಾ  ಪಾಲ್ಗೊಳ್ಳುವುದನ್ನು ಬೆಳೆಸಿಕೊಂಡಿರುತ್ತಾರೆ.

                     "ಶ್ರೀ ಶಾರದ ವೇದಿಕೆ"ಯೆಂಬ ವಾಟ್ಸ್‌ಅಪ್ ಬಳಗವೊಂದನ್ನು ನಿರ್ಮಿಸಿಕೊಂಡು ಸಾಹಿತ್ಯದ ಚಟುವಟಿಕೆಗಳನ್ನು ಪ್ರತಿವಾರವೂ ಆಯೋಜಿಸುತ್ತಿದ್ದಾರೆ.  ಛಂದಸ್ಸಿನ ಹಲವು ವಿಷಯಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ಕೊಡುವಷ್ಟು ಪ್ರಬುದ್ಧೆಯಾಗಿದ್ದಾರೆ.  ಕವಿಗೋಷ್ಟಿಗಳಲ್ಲಿ ಪಾಲ್ಗೊಳ್ಳುವಿಕೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಛಂದೋಬದ್ಧ ಗೀತೆಗಳು, ವೃತ್ತಛಂದಸ್ಸು, ಸಾಂಗತ್ಯ, ಮುಕ್ತಕಗಳು, ತ್ರಿಪದಿಗಳು, ಭಾವಗೀತೆ, ನವ್ಯಗೀತೆ, ಜಾನಪದ ಶೈಲಿಯ ಗೀತೆಗಳು, ಶಿಶುಕವನಗಳು, ಭಕ್ತಿಗೀತೆ, ನಾಡಗೀತೆಯ ಜೊತೆಗೆ ಗಝಲ್ ಹೀಗೆ ಹಲವು ಪ್ರಕಾರಗಳಲ್ಲಿ ಸಾವಿರಾರು ಬರೆಹಗಳನ್ನು ಬರೆದಿದ್ದಾರೆ. ಇವುಗಳ ಜೊತೆಗೆ ಅಂಕಣ ಬರೆಹಗಳು, ಲೇಖನಗಳು, ವಿಮರ್ಶಾ ಲೇಖನಗಳು, ಹಾಗೂ ಅನೇಕರ ಕೃತಿಗಳಿಗೆ ಮುನ್ನುಡಿಗಳನ್ನು ಬರೆದಿದ್ದಾರೆ. 



                   ರಾಜ್ಯಮಟ್ಟದ ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುವ ಇವರು ಈಗಾಗಲೆ  "ಕಾನನದ ಅರಸಿ", "ಅಭಿಭಾವನ" ಭಾವಗೀತೆ ಸಂಕಲನ, "ನೆಲಸಿರಿಯ ಮಣಿಗಳು" ಶಿಶು ಸಾಹಿತ್ಯ, "ಎದೆಯೂರಿನ ಗಝಲ್" ಎಂಬ ಗಝಲ್ ಕೃತಿಯೂ ಸೇರಿದಂತೆ ನಾಲ್ಕು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ವಿಮರ್ಶ ಲೇಖನ ಕೃತಿ ಮತ್ತು ಮುಕ್ತಕ ಕೃತಿ ಮುದ್ರಣದ ಹಾದಿದಲ್ಲಿವೆ ಎಂದು ಹೇಳಿಕೊಳ್ಳುತ್ತಾರೆ. ಇವರ ಹಲವಷ್ಟು ಬರೆಹಗಳು ವಿಶ್ವವಾಣಿ, ತುಮಕೂರು ವಾರ್ತೆ, ಜನಮಿಡಿತ ಪತ್ರಿಕೆ, ವರ್ತಮಾನ ಪತ್ರಿಕೆ, ಲೇಖನಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ.

                  

         ಇವರು ರಾಜ್ಯ ಬರಹಗಾರರ ಬಳಗ ಹೂವಿನಹಡಗಲಿ ಘಟಕದ ವತಿಯಿಂದ  2020-21ನೇ ಸಾಲಿನ ರಾಜ್ಯಮಟ್ಟದ "ಸಾಹಿತ್ಯ ಸಿಂಧು" ಪ್ರಶಸ್ತಿ, ಮಾಣಿಕ್ಯ ಪ್ರಕಾಶನ ಹಾಸನ ವತಿಯಿಂದ ರಾಜ್ಯಮಟ್ಟದ

"ಜನ್ನ ಕಾವ್ಯ ಪ್ರಶಸ್ತಿ" ಕುವೆಂಪು ಜನ್ಮದಿನೋತ್ಸವದ ಪ್ರಯುಕ್ತ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ವತಿಯಿಂದ ರಾಜ್ಯಮಟ್ಟದ "ಶತಶೃಂಗ ಪ್ರಶಸ್ತಿ" ಮಂಡ್ಯಜಿಲ್ಲೆಯ ದಕ್ಷ ಟಿವಿ ಚಾನೆಲ್ ವತಿಯಿಂದ "ದಕ್ಷಪುರಸ್ಕಾರ, ಮಹಾಲಿಂಗ ರಂಗ ಸಾಹಿತ್ಯ ಪ್ರಶಸ್ತಿ" "ತಾಲೂಕು ರಾಜ್ಯೋತ್ಸವ ಪ್ರಶಸ್ತಿ" ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ "ಮೈಸೂರು ಮಹಾರಾಣಿ ರಾಜಮಾತೆ ಕೆಂಪನಂಜಮಣ್ಣಿ ಪುರಸ್ಕಾರ"  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಾಗಮಂಗಲದ ವತಿಯಿಂದ "ನಿತ್ಯೋತ್ಸಾಹಿ ಕನ್ನಡತಿ ಪ್ರಶಸ್ತಿ" ಗಳಿಗೆ ಭಾಜನರಾಗಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಂಡ್ಯ ಜಿಲ್ಲೆಯ ಅಧ್ಯಕ್ಷಿಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.


                 ಪತಿ ಶ್ರೀ ಮಂಜುನಾಥಗೌಡ ಎಮ್.ಎಸ್, ಪುತ್ರ ಕುಶಾಲ್ ಪಿ.ಎಮ್.ಗೌಡ ಇವರೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಾಸಬಾಗಿದ್ದಾರೆ. ಇವರ ಮುಂದಿನ ಬದುಕು ಬರೆಹಗಳು ಇನ್ನಷ್ಟೂ ಬೆಳಗಿ ಜನಾನುರಾಗಿಯಾಗಿ ರಾಜ್ಯಾದ್ಯಂತ ಪ್ರಖ್ಯಾತರಾಗಲಿ ಎಂದು ಹಾರೈಸೋಣ. 

ಅಭಿಜ್ಞಾ ಪಿ.ಎಮ್ ಗೌಡ ಅವರೊಂದಿಗೆ ಮಂಡ್ಯದ ಒಂದು ಕಾರ್ಯಕ್ರಮದಲ್ಲಿ ಲೇಖಕರು


ಎಂದೆಂದಿಗೂ ಸಾಹಿತ್ಯಾಸಕ್ತ ವೈ

ಲೇಶ. ಪಿ.ಎಸ್ ಕೊಡಗು. 



Comments

  1. ಅಭಿನಂದನೆಗಳು ಮೇಡಂ 💐ನಿಮ್ಮ ಸಾಹಿತ್ಯ ಕೃಷಿ ಇನ್ನೂ ಉತ್ತುಂಗದ ಶಿಖರ ತಲುಪಲಿ 💐ಶುಭವಾಗಲಿ 🙏🏽

    ReplyDelete

Post a Comment

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು